ಪ್ರಜಾಪ್ರಭುತ್ವ ಪರರೊಂದಿಗೆ ಮಾತುಕತೆ ಆರಂಭಿಸಿದ ಹಾಂಕಾಂಗ್ ನಾಯಕಿ

Update: 2019-08-27 16:24 GMT

 ಹಾಂಕಾಂಗ್, ಆ. 27: ನಗರದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವ ಪರ ಚಳವಳಿಯ ಬಗ್ಗೆ ಯುವಕರ ಒಂದು ಗುಂಪಿನೊಂದಿಗೆ ಮಾತನಾಡಿರುವುದಾಗಿ ಹಾಂಕಾಂಗ್ ನಾಯಕಿ ಕ್ಯಾರೀ ಲ್ಯಾಮ್ ಮಂಗಳವಾರ ಹೇಳಿದ್ದಾರೆ. ಆದರೆ, ಪ್ರತಿಭಟನಕಾರರ ಬೇಡಿಕೆಗಳಿಗೆ ನಾನು ಜಗ್ಗಿಲ್ಲ ಎಂದು ಅವರು ಹೇಳಿದ್ದಾರೆ.

ಸೋಮವಾರ ಮುಚ್ಚಿದ ಬಾಗಿಲ ಹಿಂದೆ ನಡೆದ ಸಭೆಯಲ್ಲಿ ಚಳವಳಿಕಾರರ ಬೇಡಿಕೆಗಳಿಗೆ ಸಂಬಂಧಿಸಿ ಸರಕಾರದ ನಿಲುವನ್ನು ಅವರಿಗೆ ವಿವರಿಸಿದ್ದೇನೆ ಎಂದು ಲ್ಯಾಮ್ ನುಡಿದರು.

ಪ್ರತಿಭಟನಕಾರರ ಬೇಡಿಕೆಗಳನ್ನು ತನ್ನ ಸರಕಾರ ನಿರ್ಲಕ್ಷಿಸುತ್ತಿದೆ ಎಂಬ ದೂರುಗಳನ್ನು ಅವರು ತಳ್ಳಿಹಾಕಿದರು. ಗಡಿಪಾರು ಮಸೂದೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು, ಪ್ರತಿಭಟನಕಾರರನ್ನು ಮಣಿಸಲು ಪೊಲೀಸರು ಅಧಿಕ ಬಲಪ್ರಯೋಗ ನಡೆಸಿರುವ ಬಗ್ಗೆ ಸ್ವತಂತ್ರ ತನಿಖೆಯಾಗಬೇಕು ಮತ್ತು ಪ್ರಜಾಸತ್ತಾತ್ಮಕ ಚುನಾವಣೆಗಳು ನಡೆಯಬೇಕು ಎನ್ನುವುದು ಪ್ರತಿಭಟನಕಾರರ ಬೇಡಿಕೆಗಳಾಗಿವೆ.

‘‘ಅದು ಬೇಡಿಕೆಗಳಿಗೆ ಸ್ಪಂದಿಸದಿರುವುದಲ್ಲ, ಅಂಥ ಬೇಡಿಕೆಗಳನ್ನು ಸ್ವೀಕರಿಸದೆ ಇರುವುದಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕ್ಯಾರೀ ಲ್ಯಾಮ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News