ಉಳ್ಳಾಲ: ಸೆ.1 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ

Update: 2019-08-29 05:50 GMT

ಉಳ್ಳಾಲ, ಆ.29: ಡ್ರೀಮ್ಸ್ ಇಂಡಿಯಾ ಫೌಂಡೇಶನ್ ಹಳೇಕೊಟೆ ಉಳ್ಳಾಲ ಹಾಗೂ ಯೇನಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.1 ರಂದು ಹಳೆಕೋಟೆ ಬೈತುರಹ್ಮಾನ್ ವಸತಿ ಸಮುಚ್ಚಯದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಲಿದೆ.

ಶಿಬಿರದದಲ್ಲಿ ಸಾಮಾನ್ಯ ವೈದ್ಯಕೀಯ, ಮಕ್ಕಳ ತಜ್ಞರು, ಮಹಿಳಾ ವಿಭಾಗ, ನೇತ್ರ ತಪಾಸಣೆ, ಚರ್ಮರೋಗ ವಿಭಾಗದ ಚಿಕಿತ್ಸೆ, ದಂತ ತಪಾಸಣೆ ಹಾಗೂ ಎಲ್ಲಾ ವಿಭಾಗದಲ್ಲೂ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News