ತೊಕ್ಜೊಟ್ಟು: ವಸತಿ ಸಮುಚ್ಚಯಕ್ಕೆ ಯು.ಟಿ. ಖಾದರ್ ಭೇಟಿ, ನೀರು ನಿಲ್ಲುವ ಪ್ರದೇಶಗಳ ಪರಿಶೀಲನೆ

Update: 2019-08-29 10:22 GMT

ಉಳ್ಳಾಲ, ಆ.29: ಉಳ್ಳಾಲ ನಗರ ಸಭೆ ಮತ್ತು ಸುತ್ತಮುತ್ತಲಿನ ನೀರು ನಿಲ್ಲುವ ಪ್ರದೇಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಯು.ಟಿ. ಖಾದರ್ ಉಳ್ಳಾಲ ನಗರ ಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಅವರು ತೊಕ್ಕೊಟ್ಟು ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಕ್ಕೆ ಭೇಟಿ ನೀಡಿ ನೀರು ನಿಂತ ಕಟ್ಟಡಗಳ ವೀಕ್ಷಿಸಿದ ಬಳಿಕ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಹು ಮಹಡಿ ಕಟ್ಟಡ ಹೊಂದಿರುವ ಬಿಲ್ಡರ್ ಗಳು ಸರಿಯಾದ ವ್ಯವಸ್ಥೆ ಮಾಡದಿದ್ದರೆ ಕಟ್ಟಡಗಳ ಲೈಸೆನ್ಸ್ ರದ್ದು ಮಾಡಬೇಕು. ಉಳ್ಳಾಲ ಆರೋಗ್ಯಾಧಿಕಾರಿ ಕರ್ತವ್ಯ ನಿರ್ಲಕ್ಷ್ಯ ಮಾಡಿದರೆ ಅಮಾನತು ಮಾಡಲಾಗುವುದು. ನಿಯಮ ಉಲ್ಲಂಘಿಸುವ ಕಟ್ಟಡಗಳ ಲೈಸೆನ್ಸ್ ನೊಂದಿಗೆ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು  ಎಚ್ಚರಿಸಿದ ಖಾದರ್ ಅವರು, ಈ ಬಗ್ಗೆ ಜಿಲ್ಲಾಧಿಕಾರಿ ಯವರ ಗಮನ ಸೆಳೆದು ಕ್ರಮ ಕೈಗೊಳ್ಳಲಾಗುವುದು ಎಂದರು. 

ಈ ಸಂದರ್ಭದಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ನಗರ ಸಭೆಯ ಮಾಜಿ ಅಧ್ಯಕ್ಷ ಕುಂಞಿಮೋನು, ನಿಸಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News