×
Ad

ಖ್ಯಾತ ಹೃದಯತಜ್ಞ ಉಪೇಂದ್ರ ಕೌಲ್ ರನ್ನು ಉಗ್ರ ಚಟುವಟಿಕೆ ಸಂಬಂಧಿಸಿ ವಿಚಾರಣೆಗೆ ಕರೆದ ಎನ್ ಐಎ!

Update: 2019-08-30 19:02 IST

ಹೊಸದಿಲ್ಲಿ, ಆ.30: ದಿಲ್ಲಿ ಮೂಲದ ಖ್ಯಾತ ಹೃದಯ ತಜ್ಞ ಡಾ.ಉಪೇಂದ್ರ ಕೌಲ್ ಅವರನ್ನು ಉಗ್ರ ಚಟುವಟಿಕೆಗಳಿಗೆ ಹಣ ಪೂರೈಕೆ ಕುರಿತು ವಿಚಾರಣೆಗೆ ಕರೆದು ರಾಷ್ಟ್ರೀಯ ತನಿಖಾ ಸಂಸ್ಥೆ ನಗೆಪಾಟಲಿಗೀಡಾದ ವಿಷಯ ವರದಿಯಾಗಿದೆ.

ಆಗಿದ್ದಿಷ್ಟು…

ಜೈಲಿನಲ್ಲಿರುವ ಕಾಶ್ಮೀರದ ಹುರಿಯತ್ ನಾಯಕ ಯಾಸಿನ್ ಮಲಿಕ್ ಅವರಿಗೆ ಡಾ. ಉಪೇಂದ್ರ ಕೌಲ್ ಅವರು ಚಿಕಿತ್ಸೆ ನೀಡಿದ್ದರು. ಈ ಕುರಿತು ಅವರು ಹಾಗು ಯಾಸಿನ್ ಮಲಿಕ್ ನಡುವೆ ನಡೆದ ಎಸ್ಸೆಮ್ಮೆಸ್ ಸಂದೇಶದಲ್ಲಿ INR 2.78 ಎಂಬ ಪದಗಳಿದ್ದವು. ಇದನ್ನು ಭಾರತೀಯ ರೂಪಾಯಿ 2.78 ಕೋಟಿ ಎಂದು ತಿಳಿದುಕೊಂಡ ಎನ್ ಐಎ ಅವರನ್ನು ವಿಚಾರಣೆಗೆ ಬರುವಂತೆ ಹೇಳಿದೆ. ವಿಚಾರಣೆಗೆ ಬಂದ ಡಾ ಕೌಲ್ ಅವರು INR ಎಂದರೆ internationalised normalised ratio ಎಂಬ ರಕ್ತ ಪರೀಕ್ಷೆಯ ಫಲಿತಾಂಶ ಎಂದು ವಿವರಿಸಿದಾಗ ಬೇಸ್ತು ಬೀಳುವ ಸರದಿ ಎನ್ ಐಎಯದ್ದು.

ಈ ಬಗ್ಗೆ ಎನ್ ಡಿ ಟಿವಿಯ ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರು ಟ್ವೀಟ್ ಮಾಡಿದ್ದಾರೆ.

ದೇಶದ ಖ್ಯಾತ ಹೃದಯ ತಜ್ಞರಲ್ಲೊಬ್ಬರಾಗಿರುವ ಡಾ ಕೌಲ್ ಅವರು ಇತ್ತೀಚಿಗೆ ಟಿವಿ ಚರ್ಚೆಯೊಂದರಲ್ಲಿ ಭಾಗವಹಿಸಿ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಕ್ರಮವನ್ನು ವಿರೋಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News