×
Ad

ಹುಲ್ಲು ಮೇಯುವ ಸಿಂಹದ ವಿಡಿಯೋ ವೈರಲ್ !

Update: 2019-08-30 19:57 IST

ಗುಜರಾತ್ ನ ಗಿರ್ ಅರಣ್ಯದಲ್ಲಿ ಸಿಂಹವೊಂದು ಹುಲ್ಲು ಮೇಯುವ ವಿಡಿಯೋವೊಂದು ವೈರಲ್ ಆಗಿದೆ. ಜನಸಾಮಾನ್ಯರ ನಡುವೆ ಈ ಸಿಂಹ ಹುಲ್ಲು ತಿನ್ನುವ ವಿಡಿಯೋ ಬಗೆ ಬಗೆ ಚರ್ಚೆಗಳಿಗೆ ಆಹಾರವಾಗಿದೆ !

ಸಿಂಹವೇ ಹುಲ್ಲು ತಿನ್ನುತ್ತಿದೆ ಎಂಬ ಗುಲ್ಲು ಎಲ್ಲೆಡೆ ಹರಡುತ್ತಿದ್ದಂತೆ ಇದಕ್ಕೆ ಬೇರೆ ಬೇರೆ ಬಣ್ಣ ಸೇರಿಕೊಂಡಿದೆ. ಆರ್ಥಿಕ ಹಿಂಜರಿತದ ಚರ್ಚೆ ಎಲ್ಲೆಡೆ ಇರುವಾಗ ಸಿಂಹಕ್ಕೂ ತಿನ್ನುವ ಆಹಾರಕ್ಕೆ ತತ್ವಾರ ಬಂತೇ ಎಂದು ಕೆಲವರು ಗಂಭೀರವಾಗಿ, ಇನ್ನು ಕೆಲವರು ತಮಾಷೆಯಾಗಿ ಕೇಳುತ್ತಿದ್ದಾರೆ.

ಆದರೆ ವನ್ಯಜೀವಿ ತಜ್ಞರ ಪ್ರಕಾರ ಸಿಂಹ ಸಹಿತ ಯಾವುದೇ ಮಾಂಸಾಹಾರಿ ಪ್ರಾಣಿ ಹೀಗೆ ಒಮ್ಮೊಮ್ಮೆ ಹುಲ್ಲು ತಿನ್ನುವುದು ತೀರಾ ಅಸಹಜವೇನೂ ಅಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗುಜರಾತ್ ಅರಣ್ಯ ಇಲಾಖೆ 'ವೈಜ್ಞಾನಿಕ ವಿವರಣೆ' ಮೂಲಕ ಜಿಜ್ಞಾಸುಗಳ ಮೆದುಳಿಗೆ ಮೇವು ಒದಗಿಸಿದೆ.

"ಮಾಂಸಾಹಾರಿ ಪ್ರಾಣಿಗಳಿಗೆ ತೀರಾ ಅಜೀರ್ಣವಾದಾಗ ಹೀಗೆ ಒಮ್ಮೊಮ್ಮೆ ಹುಲ್ಲು ಮೇಯುತ್ತವೆ. ಇದರಿಂದ ಅಜೀರ್ಣವಾದ ಆಹಾರ ವಾಂತಿಯ ರೂಪದಲ್ಲಿ ಹೊರಬಂದು ಅವುಗಳಿಗೆ ಆರಾಮ ಸಿಗುತ್ತದೆ. ಇದರಿಂದ ಅವು ಮತ್ತೆ ಸಹಜ ಸ್ಥಿತಿಗೆ ಬರುತ್ತವೆ" ಎಂದು ಅದು ವಿವರಣೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News