ಭಾರತೀಯ ಮಹಿಳೆಯರ ನಿರುದ್ಯೋಗ ದರ ಪುರುಷರಿಗಿಂತ ದುಪ್ಪಟ್ಟು: ಅಧ್ಯಯನ

Update: 2019-08-30 16:15 GMT

ಹೊಸದಿಲ್ಲಿ, ಆ.30: ಭಾರತೀಯ ಮಹಿಳೆಯರ ನಿರುದ್ಯೋಗ ದರ ಸಮಾನ ಅರ್ಹತೆ ಹೊಂದಿರುವ ಪುರುಷರಿಗಿಂತ ದುಪ್ಪಟ್ಟಿಗೂ ಅಧಿಕವಾಗಿದೆ ಎಂದು ಹೊಸ ಅಧ್ಯಯನ ವರದಿಯೊಂದು ತಿಳಿಸಿದೆ. ಹಾರ್ವಡ್ ವಿದ್ಯಾರ್ಥಿಗಳಾದ ರಶೆಲ್ ಲೆವೆನ್ಸನ್ ಮತ್ತು ಲಾಯಿಲಾ ಒಕೇನ್ ನಡೆಸಿದ ಭಾರತದಲ್ಲಿ ಉದ್ಯೋಗದಲ್ಲಿ ಲಿಂಗ ಒಳಗೊಳ್ಳುವಿಕೆ ಎಂಬ ಹೆಸರಿನ ಅಧ್ಯಯನದ ವರದಿಯಲ್ಲಿ, ಭಾರತದಲ್ಲಿ ಶೇ. 8.7 ದುಡಿಯುವ ವಯಸ್ಸಿನ, ಸುಶಿಕ್ಷಿತ ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ. ಪುರುಷರಲ್ಲಿ ಈ ಪ್ರಮಾಣ ಶೇ.4 ಆಗಿದೆ ಎಂದು ತಿಳಿಸಲಾಗಿದೆ.

ಮಹಿಳೆಯರ ನಿರ್ಧಾರ ಮತ್ತು ಉದ್ಯೋಗವನ್ನು ಪಡೆಯುವ ಸಾಮರ್ಥ್ಯ ಮೇಲೆ ಅನೇಕ ಅಂಶಗಳು ಪ್ರಭಾವ ಬೀರಿದರೂ, ಅಂತರ್‌ರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಸಂಶೋಧನೆಯಲ್ಲಿ ಕಂಡುಬಂದಿರುವಂತೆ ನಿರುದ್ಯೋಗ ಪ್ರಮಾಣದಲ್ಲಿ, ಮುಖ್ಯವಾಗಿ ಉನ್ನತ ಶಿಕ್ಷಣ ಪಡೆದವರಲ್ಲಿ, ಸ್ತ್ರೀ-ಪುರುಷರ ಮಧ್ಯೆ ಅಂತರವಿರಲು ಹೆಚ್ಚುವರಿ ತಡೆಗಳೂ ಕಾರಣ ಎಂದು ವರದಿ ತಿಳಿಸಿದೆ.

ಲೆವೆನ್ಸನ್ ಮತ್ತು ಒಕೇನ್ ಅವರ ವಿಶ್ಲೇಷಣೆ, ಶಾರ್ಟ್‌ಲಿಸ್ಟ್ ಎಂಬ ಭಾರತೀತ ಸಂಸ್ಥೆ 2016-17ರ ಮಧ್ಯೆ ನೇಮಕಾತಿ ನಡೆಸಿರುವ ಭಾರತ ಮೂಲದ 200 ಉದ್ಯೋಗಗಳನ್ನು ಆಧರಿಸಿದೆ. ಅಧ್ಯಯನದಲ್ಲಿ ಕಂಡುಬಂದ ಅಂಶವೆಂದರೆ, ಭಾರತೀಯ ಸಂವಿಧಾನದ ಪ್ರಕಾರ ಲಿಂಗಾಧರಿತ ತಾರತಮ್ಯ ಕಾನೂಉಬಾಹಿರವಾಗಿದ್ದರೂ ನೇಮಕಾತಿ ವ್ಯವಸ್ಥಾಪಕರು ಮತ್ತು ಕಾರ್ಮಿಕ ಮಾರುಕಟ್ಟೆಯ ಇತರ ತಜ್ಞರ ಜೊತೆ ನಡೆಸಿದ ಮಾತುಕತೆಯಲ್ಲಿ ಜಗತ್ತಿನ ಇತರ ದೇಶಗಳಲ್ಲಿರುವಂತೆ ಭಾರತದಲ್ಲೂ ನೇಮಕಾತಿ ಪ್ರಕ್ರಿಯೆಯಲ್ಲಿ ತಾರತಮ್ಯ ನಡೆಸಲಾಗುತ್ತದೆ ಎನ್ನುವುದು ಬಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News