ಇರಾನ್ ತೈಲ ಟ್ಯಾಂಕರ್ ಲೆಬನಾನ್‌ನತ್ತ: ಟರ್ಕಿ
Update: 2019-08-30 22:10 IST
ಅಂಕಾರ (ಟರ್ಕಿ), ಆ. 30: ಬ್ರಿಟಿಶ್ ಭೂಭಾಗ ಜಿಬ್ರಾಲ್ಟರ್‌ನಲ್ಲಿ ಆರು ವಾರಗಳ ಕಾಲ ತಡೆಹಿಡಿಯಲ್ಪಟ್ಟಿದ್ದ ಇರಾನ್‌ನ ತೈಲ ಟ್ಯಾಂಕರ್ ಈಗ ಲೆಬನಾನ್‌ನತ್ತ ಮುಖ ಮಾಡಿದೆ ಎಂದು ಟರ್ಕಿಯ ವಿದೇಶ ಸಚಿವ ಮೆವ್ಲೆತ್ ಕೌಸೊಗ್ಲು ಶುಕ್ರವಾರ ಹೇಳಿದ್ದಾರೆ.
ತೈಲ ಟ್ಯಾಂಕರನ್ನು ಜಿಬ್ರಾಲ್ಟರ್ ಈ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು.
‘‘ಈ ಟ್ಯಾಂಕರ್ ಟರ್ಕಿಯ ಎಸ್ಕರುನ್‌ನತ್ತ ಹೋಗುತ್ತಿಲ್ಲ. ವಾಸ್ತವವಾಗಿ ಅದು ಲೆಬನಾನ್‌ನತ್ತ ಮುಖ ಮಾಡಿದೆ’’ ಎಂದು ಓಸ್ಲೊಗೆ ನೀಡಿದ ಭೇಟಿಯ ವೇಳೆ ಕೌಸೊಗ್ಲು ಹೇಳಿದರು.