ಎನ್ ಆರ್ ಸಿ ಅಂತಿಮ ಪಟ್ಟಿಯಲ್ಲಿ ಅಸ್ಸಾಂ ವಿಪಕ್ಷ ಶಾಸಕನ ಹೆಸರಿಲ್ಲ!
ಗುವಾಹಟಿ, ಆ.31: ಇಂದು ಬಿಡುಗಡೆಗೊಂಡ ರಾಷ್ಟ್ರೀಯ ನಾಗರಿಕ ನೋಂದಣಿಯಿಂದ ಅಸ್ಸಾಂನ 19 ಲಕ್ಷ ಜನರು ಹೊರಗುಳಿದಿದ್ದು, ಇದರಲ್ಲಿ ರಾಜ್ಯದ ಅತ್ಯಂತ ಬಲಿಷ್ಟ ವಿಪಕ್ಷವೊಂದರ ಶಾಸಕರೊಬ್ಬರು ಸೇರಿದ್ದಾರೆ.
ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ನ ಶಾಸಕ ಅನಂತ ಕುಮಾರ್ ಮಾಲೋ ಇಂದು ಬಿಡುಗಡೆಗೊಂಡ ಎನ್ ಆರ್ ಸಿ ಪಟ್ಟಿಯಲ್ಲಿಲ್ಲ. ಇದೇ ರೀತಿ ಕಾರ್ಗಿಲ್ ಯೋಧ ಸನಾವುಲ್ಲಾ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿದೆ.
"ಒಟ್ಟು 3,11,21,004 ಜನರು ಅಂತಿಮ ಎನ್‌ಆರ್‌ಸಿಯಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿದ್ದಾರೆ, ಆದರೆ ತಮ್ಮ ಹಕ್ಕುಗಳಿಗಾಗಿ ಅರ್ಜಿ ಸಲ್ಲಿಸದವರು ಸೇರಿದಂತೆ 19,06,657 ಜನರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಫಲಿತಾಂಶದಿಂದ ತೃಪ್ತರಾಗದವರು ವಿದೇಶಿಯರ ನ್ಯಾಯಮಂಡಳಿಗಳ ಮುಂದೆ ಮೇಲ್ಮನವಿ ಸಲ್ಲಿಸಬಹುದು ”ಎಂದು ಎನ್‌ಆರ್‌ಸಿಯ ರಾಜ್ಯ ಸಂಯೋಜಕ ಪ್ರತೀಕ್ ಹಜೆಲಾ ಹೇಳಿದ್ದಾರೆ.
ಸೇರ್ಪಡೆಗಳ ಪೂರಕ ಪಟ್ಟಿಯ ಪ್ರತಿಗಳು ಸಾರ್ವಜನಿಕ ವೀಕ್ಷಣೆಗೆ ಎನ್‌ಆರ್‌ಸಿ ಸೇವಾ ಕೇಂದ್ರಗಳು (ಎನ್‌ಎಸ್‌ಕೆ), ಜಿಲ್ಲಾಧಿಕಾರಿ ಕಚೇರಿಗಳು ಮತ್ತು ಸರ್ಕಲ್ ಅಧಿಕಾರಿಯ ಕಚೇರಿಗಳಲ್ಲಿ ಕಚೇರಿ ಸಮಯದಲ್ಲಿ ಲಭ್ಯವಿದೆ ಎಂದು ಎನ್‌ಆರ್‌ಸಿಯ ರಾಜ್ಯ ಸಂಯೋಜಕರ ಕಚೇರಿ ಮೂಲಗಳು ತಿಳಿಸಿದೆ.