ಸೆ.1ರಿಂದ ರೈಲ್ವೇ ಇ-ಟಿಕೆಟ್‌ಗಳ ಮೇಲೆ ಸೇವಾ ಶುಲ್ಕ

Update: 2019-08-31 17:33 GMT

ಹೊಸದಿಲ್ಲಿ, ಆ.31: ಐಆರ್‌ಸಿಟಿಸಿ ಮೂಲಕ ಪಡೆಯಲಾದ ಇ-ಟಿಕೆಟ್‌ಗಳ ಮೇಲೆ ಸೆ.1ರಿಂದ ಸೇವಾ ಶುಲ್ಕವನ್ನು ಮತ್ತೆ ವಿಧಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

 ಸೆ.1ರಿಂದ ಎಸಿ- ರಹಿತ ಸೀಟಿನ ಟಿಕೆಟ್ ಮೇಲೆ 15 ರೂ, ಎಸಿ ಸೀಟಿನ ಟಿಕೆಟ್ ಮೇಲೆ 30 ರೂ ಸೇವಾ ಶುಲ್ಕ ವಿಧಿಸಲಾಗುವುದು . ಜಿಎಸ್‌ಟಿ ತೆರಿಗೆ ಪ್ರತ್ಯೇಕ ಎಂದು ರೈಲ್ವೇ ಇಲಾಖೆಯ ಆಗಸ್ಟ್ 30ರ ಆದೇಶದಲ್ಲಿ ತಿಳಿಸಲಾಗಿದೆ.

ಡಿಜಿಟಲ್ ಪಾವತಿ ವ್ಯವಸ್ಥೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೂರು ವರ್ಷದ ಹಿಂದೆ ಸೇವಾ ಶುಲ್ಕವನ್ನು ಹಿಂಪಡೆಯಲಾಗಿತ್ತು. ಆಗ ಎಸಿ ರಹಿತ ಸೀಟುಗಳ ಟಿಕೆಟ್ ಮೇಲೆ 20 ರೂ, ಎಸಿ ಸೀಟುಗಳ ಟಿಕೆಟ್ ಮೇಲೆ 40 ರೂ. ಸೇವಾ ಶುಲ್ಕ ವಿಧಿಸಲಾಗುತ್ತಿತ್ತು. ಸೇವಾ ಶುಲ್ಕ ರದ್ದುಗೊಳಿಸಿರುವುದು ತಾತ್ಕಾಲಿಕ ಕ್ರಮವಾಗಿದೆ. ಸೇವಾ ಶುಲ್ಕ ರದ್ದುಗೊಳಿಸಿದ ಬಳಿಕ 2016-17ರಲ್ಲಿ ಇಂಟರ್‌ನೆಟ್ ಟಿಕೆಟಿಂಗ್ ಆದಾಯದಲ್ಲಿ ಶೇ.26ರಷ್ಟು ಕುಸಿತವಾಗಿದೆ ಎಂದು ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News