ತೂತುಕುಡಿ ಸ್ಟರ್ಲೈಟ್ ಪ್ರತಿಭಟನೆ: ರಜಿನಿಕಾಂತ್ ಗೆ ಸಂಕಷ್ಟ

Update: 2019-08-31 18:06 GMT

ಚೆನ್ನೈ, ಆ.31: ತೂತುಕುಡಿಯಲ್ಲಿ 2018ರ ಮೇ 22ರಂದು ನಡೆದ ಪೊಲೀಸ್ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯಬಿದ್ದರೆ ನಟ ರಜನೀಕಾಂತ್‌ರನ್ನು ವಿಚಾರಣೆಗೆ ಗುರಿ ಪಡಿಸಲಾಗುವುದು ಎಂದು ತನಿಖಾ ಆಯೋಗ ತಿಳಿಸಿದೆ.

ಈ ಘಟನೆಯಲ್ಲಿ 13 ಪ್ರತಿಭಟನಾಕಾರರು ಮೃತಪಟ್ಟಿದ್ದರು. ಘಟನೆಯ ತನಿಖೆ ನಡೆಸಲು ನ್ಯಾಯಾಧೀಶ ಅರುಣ ಜಗದೀಶನ್ ನೇತೃತ್ವದ ಆಯೋಗವನ್ನು ನೇಮಿಸಲಾಗಿದೆ. ತೂತುಕುಡಿಯ ಸ್ಟರ್ಲೈಟ್ ಸಂಸ್ಥೆಯನ್ನು ವಿರೋಧಿಸಿ ಈ ಪ್ರತಿಭಟನೆ ನಡೆದಿತ್ತು. ತೂತುಕುಡಿಗೆ ಸಮಾಜ ವಿರೋಧಿ ಶಕ್ತಿಗಳು ನುಸುಳಿವೆ ಎಂದು ರಜನೀಕಾಂತ್ ಹೇಳಿಕೆ ನೀಡಿದ್ದರು.

ತನಿಖೆ ನಡೆಸುತ್ತಿರುವ ಆಯೋಗ 13 ಹಂತಗಳಲ್ಲಿ 379 ಮಂದಿಯನ್ನು ವಿಚಾರಣೆಗೆ ಒಳಪಡಿಸಿದೆ. ತನಿಖಾ ಆಯೋಗದ ತನಿಖೆಯನ್ನು 2020ರ ಫೆಬ್ರವರಿವರೆಗೆ ಮುಂದುವರಿಸಲಾಗಿದೆ. ಪ್ರತಿಭಟನೆ ಸಂದರ್ಭ ಗಾಯಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸರಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು. ಅಗತ್ಯಬಿದ್ದರೆ ಸಿನೆಮ ನಟ ರಜನೀಕಾಂತ್‌ರನ್ನೂ ವಿಚಾರಣೆ ನಡೆಸಲಾಗುವುದು ಎಂದು ಏಕಸದಸ್ಯ ತನಿಖಾ ಆಯೋಗದ ವಕೀಲ ಅರುಲ್ ವಾಡಿವೆಲೆಸ್ಕರ್ ಹೇಳಿದ್ದಾರೆ. ಇದುವರೆಗೆ ನಡೆಸಿರುವ ತನಿಖೆಯ ವರದಿಯನ್ನು ಮದ್ರಾಸ್ ಹೈಕೋರ್ಟ್‌ಗೆ ಸಲ್ಲಿಸಲಾಗುವುದು ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News