73 ವರ್ಷದ ವೈದ್ಯರನ್ನು ಥಳಿಸಿ ಕೊಂದ ಗುಂಪು

Update: 2019-09-01 13:46 GMT
Photo: NDTV

ಜೋರ್ಹಟ್, ಸೆ.1: ಟೀ ಎಸ್ಟೇಟ್ ಕಾರ್ಮಿಕರ ಗುಂಪೊಂದು 73 ವರ್ಷದ ವೈದ್ಯರೊಬ್ಬರನ್ನು ಥಳಿಸಿ ಕೊಂದ ಘಟನೆ ಅಸ್ಸಾಂನ ಜೋರ್ಹಟ್ ಜಿಲ್ಲೆಯಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿದ್ದ ವೈದ್ಯರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

“ಎಸ್ಟೇಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರೊಬ್ಬರು ಮೃತಪಟ್ಟ ನಂತರ ಕಾರ್ಮಿಕರು 73 ವರ್ಷದ ವೈದ್ಯ ಡೆಬೆನ್ ದತ್ತಾರಿಗೆ ಥಳಿಸಿದ್ದಾರೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ರೋಷ್ನಿ ಅಪರಂಜಿ ತಿಳಿಸಿದ್ದಾರೆ.

ಮೃತ ವೈದ್ಯ ದತ್ತಾ ಹಲವು ದಿನಗಳಿಂದ ಸೇವೆಗೆ ಗೈರಾಗಿದ್ದರು. ಇದರಿಂದಲೇ ರೋಗಿ ಮೃತಪಟ್ಟಿದ್ದಾರೆ ಎಂದು ಆಕ್ರೋಶಿತ ಗುಂಪು ಆರೋಪಿಸಿತ್ತು. 33 ವರ್ಷದ ಸುಖ್ರಾ ಮಾಝಿ ಎಂಬವರನ್ನು ಸಂಬಂಧಿಕರು ಎಸ್ಟೇಟ್ ನೊಳಗೆ ಇರುವ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಸುಕ್ರಾ ಗಂಭೀರಾವಸ್ಥೆಯಲ್ಲಿದ್ದರು. ಆದರೆ ಆ ಸಮಯ ವೈದ್ಯ ದತ್ತಾ ಅವರು ಆಸ್ಪತ್ರೆಯಲ್ಲಿರಲಿಲ್ಲ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News