ಚಾಕು ಹಿಡಿದು ಸಂಸತ್ ಭವನದ ಆವರಣ ಪ್ರವೇಶಿಸಲೆತ್ನಿಸಿದ ವ್ಯಕ್ತಿಯ ಸೆರೆ
Update: 2019-09-02 12:43 IST
ಹೊಸದಿಲ್ಲಿ, ಸೆ.2: ಚಾಕು ಹಿಡಿದು ಸಂಸತ್ ಭವನದ ಆವರಣಕ್ಕೆ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ತೆಗೆದುಕೊಂಡ ಘಟನೆ ಸೋಮವಾರ ನಡೆದಿದೆ.
ಕಪ್ಪು ಶರ್ಟ್ ಮತ್ತು ಜೀನ್ಸ್ ಧರಿಸಿದ್ದ ವ್ಯಕ್ತಿಯನ್ನು ಸಾಗರ್ ಇನ್ಸಾ ಎಂದು ಗುರುತಿಸಲಾಗಿದೆ .ಲಕ್ಷ್ಮಿ ನಗರ ನಿವಾಸಿಯಾಗಿರುವ ಈತ ಡೇರಾ ಸಾಚಾ ಸೌದಾ ಮುಖ್ಯಸ್ಥ ಮತ್ತು ಅತ್ಯಾಚಾರ ಆರೋಪಿ ಗುರ್ಮೀತ್ ಸಿಂಗ್ ಅನುಯಾಯಿ ಎಂದು ತಿಳಿದು ಬಂದಿದೆ. ಸಂಸತ್ತು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ಈವ್ರ ವಿಚಾರಣೆಗೊಳಪಡಿಸಿದ್ದಾರೆ.
ಇದರೊಂದಿಗೆ ಪಾರ್ಲಿಮೆಂಟ್ ನ ಹೊರಗಡೆ ಸ್ವಲ್ಪ ಹೊತ್ತು ಉದ್ವಿಗ್ನ ಸ್ಥಿತಿ ಉಂಟಾಯಿತು ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ವಿಜಯ್ ಚೌಕ್ ಬದಿಯ ಗೇಟ್ ಮೂಲಕ ಮೋಟಾರುಬೈಕಿನಲ್ಲಿ ಸಂಸತ್ ಭವನಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಅವನನ್ನು ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆದರು.