×
Ad

ಪಿ.ಚಿದಂಬರಂ ಸಿಬಿಐ ಕಸ್ಟಡಿ ನಾಳೆ ತನಕ ವಿಸ್ತರಣೆ

Update: 2019-09-02 18:25 IST

ಹೊಸದಿಲ್ಲಿ, ಸೆ. 2: ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿ ಸಿಬಿಐ ವಶದಲ್ಲಿರುವ ಮಾಜಿ ಕೇಂದ್ರ   ಹಣಕಾಸು ಸಚಿವ ಪಿ ಚಿದಂಬರಂ ಅವರ ವಿಚಾರಣೆಗೆ ಒಂದು ದಿನ ಕಾಲಾವಕಾಶ ನೀಡಿದೆ.

ಚಿದಂಬರಂ ಅವರನ್ನು ಮಂಗಳವಾರ ಮಧ್ಯಾಹ್ನ 3: 30ಕ್ಕೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸಿಬಿಐ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ

ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಕುರಿತು ನ್ಯಾಯಾಲಯದಲ್ಲಿ ವಾದಿಸಿದ ಎಸ್‌ಜಿ ತುಷಾರ್ ಮೆಹ್ತಾ ಅವರು ಚಿದಂಬರಂ ಅವರ ಒಂದು ದಿನದ ಕಸ್ಟಡಿಗೆ ಕೋರಿದರು ಮತ್ತು ಅವರು “ಸಾಕ್ಷಿಯ ಮೇಲೆ ಪ್ರಭಾವ ಬೀರಬಹುದು” ಎಂಬ ಕಾರಣಕ್ಕೆ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕು ಎಂದು  ಮನವಿ ಮಾಡಿದರು.

ಆಗಸ್ಟ್ 30 ರಂದು ನೀಡಲಾದ ಮೂರು ದಿನಗಳ ಸಿಬಿಐ ಕಸ್ಟಡಿಯ ಅವಧಿ ಮುಗಿದ ಮೇಲೆ ಚಿದಂಬರಂ ಅವರನ್ನು ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಲಾಗಿತ್ತು, ಇದೇ ವೇಳೆ ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣಗಳಲ್ಲಿ ಪಿ. ಚಿದಂಬರಂ ಮತ್ತು ಅವರ ಮಗ ಕಾರ್ತಿ ಚಿದಂಬರಂ ಜಾಮೀನು ಅರ್ಜಿಗೆ ಸಂಬಂಧಿಸಿ ದಿಲ್ಲಿಯ ನ್ಯಾಯಾಲಯ ಸೆಪ್ಟೆಂಬರ್ 5 ಕ್ಕೆ ಆದೇಶ ಕಾಯ್ದಿರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News