“ಬೇಸ್ ಮೆಂಟ್ ನಲ್ಲಿ ಅಡಗಿಕೊಳ್ಳಿ, ಸ್ನಾನ ಮಾಡಿ”

Update: 2019-09-02 15:17 GMT

ಒಂದು ವೇಳೆ ಪರಮಾಣು ದಾಳಿ ನಡೆದರೆ ಜನರು ಏನು ಮಾಡಬೇಕು ಎನ್ನುವದನ್ನು ವಿವರಿಸುವ ಖಾಸಗಿ ಚಾನೆಲ್ ‘ಝೀ ನ್ಯೂಸ್’ನ ವಿಡಿಯೋವೊಂದು ಸಾಮಾಜಿಕ ಜಾಲತಾಣದ ಬಳಕೆದಾರರು ನಕ್ಕು ಸುಸ್ತಾಗುವಂತೆ ಮಾಡಿದೆ.

1:15 ನಿಮಿಷಗಳ ವಿಡಿಯೋದಲ್ಲಿ ನಿರೂಪಕ ಸುಧೀರ್ ಚೌಧರಿ ವೀಕ್ಷಕರಿಗೆ ಪರಮಾಣು ದಾಳಿಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಕೆಲ ಸಲಹೆಗಳನ್ನು ನೀಡುತ್ತಾರೆ. ‘ಸ್ಫೋಟವನ್ನು ನೇರವಾಗಿ ವೀಕ್ಷಿಸಬಾರದು, ರಕ್ಷಣೆ ಪಡೆಯಲು ನಿಮ್ಮ ಸಮೀಪವಿರುವ ಬಲಿಷ್ಠ ಕಟ್ಟಡದ ಬೇಸ್ ಮೆಂಟ್ ಓಡಿ, ಸಾಬೂನು, ಶ್ಯಾಂಪೂ ಹಾಕಿ ಸ್ನಾನ ಮಾಡಿ, ನಮ್ಮ ದೇಶದಲ್ಲಿ ಪರಮಾಣು ಬಂಕರನ್ನು ಇದುವರೆಗೂ ನಿರ್ಮಿಸಿಲ್ಲ. ಬಟ್ಟೆಗಳನ್ನು ಬಿಚ್ಚಿ ಸೀಲ್ ಮಾಡಿ, ಏಕೆಂದರೆ ಅದರಲ್ಲಿ ರೇಡಿಯೋ ಆ್ಯಕ್ಟಿವ್ ಕಿರಣಗಳಿರುತ್ತವೆ” ಎಂದವರು ಹೇಳುತ್ತಾರೆ.

ಭಾರತ-ಪಾಕಿಸ್ತಾನಗಳ ನಡುವೆ ಯುದ್ಧ ನಡೆಯಲಿದೆ, ಪರಮಾಣು ದಾಳಿಯ ಭೀತಿಯಿದೆ ಎನ್ನುವ ಮಾತುಗಳ ಹಿನ್ನೆಲೆಯಲ್ಲಿ ಝೀ ನ್ಯೂಸ್ ಈ ಸಲಹೆ ನೀಡಿದೆ ಎನ್ನಲಾಗಿದೆ. ಆದರೆ ದೇಶದ ಆರ್ಥಿಕ ಕುಸಿತದ ಗಮನ ಬೇರೆಡೆ ಸೆಳೆಯಲು ಮಾಡಿದ ಪ್ರಯತ್ನ ಎಂದು ಸಾಮಾಜಿಕ ಜಾಲತಾಣದ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News