×
Ad

ಜೆಇಇ ನೋಂದಣಿ ಆರಂಭ; ಆಮೂಲಾಗ್ರ ಬದಲಾವಣೆಗಳೇನು ಗೊತ್ತೇ?

Update: 2019-09-03 09:32 IST

ಹೊಸದಿಲ್ಲಿ, ಸೆ.3: ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮೈನ್ಸ್) ವ್ಯವಸ್ಥೆಯಲ್ಲಿ ಈ ಬಾರಿ ಸಮಗ್ರ ಬದಲಾವಣೆ ಮಾಡಲಾಗಿದ್ದು, 12ನೇ ತರಗತಿಯಲ್ಲಿ ಗಣಿತಶಾಸ್ತ್ರ ಅಧ್ಯಯನ ಮಾಡಿದವರಿಗೆ ಪ್ಲಾನಿಂಗ್ ಪದವಿ ಪ್ರವೇಶಕ್ಕೆ ಅವಕಾಶ ನೀಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. 2020ರ ಜನವರಿಲ್ಲಿ ನಡೆಯುವ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಸೋಮವಾರ ಆರಂಭವಾಗಿದೆ.

ಇಪ್ಪತ್ತು ವರ್ಷಗಳಲ್ಲೇ ಮೊದಲ ಬಾರಿಗೆ ಜೆಇಇ ಮೈನ್ಸ್ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಎಂಜಿನಿಯರಿಂಗ್ ರೇಖಾಚಿತ್ರ (ವಾಸ್ತುಶಿಲ್ಪ ಆಕಾಂಕ್ಷಿಗಳಿಗೆ) ಪ್ರಶ್ನೆಗಳನ್ನು ಕಡಿಮೆ ಮಾಡಲಾಗಿದೆ. ಎಲ್ಲ ಕೇಂದ್ರೀಯ ಅನುದಾನಿತ ತಾಂತ್ರಿಕ ಸಂಸ್ಥೆಗಳು ಮತ್ತು ಕಾಲೇಜುಗಳಿಗೆ ಪ್ರವೇಶ ಪಡೆಯಲು ಇದು ಅರ್ಹತಾ ಪರೀಕ್ಷೆಯಾಗಿದೆ.

ಬ್ಯಾಚುಲರ್ ಆಫ್ ಪ್ಲಾನಿಂಗ್ ಕೋರ್ಸ್‌ಗೆ ಪ್ರವೇಶ ಪಡೆಯಲು ಈ ಹಿಂದೆ 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರ ಕಲಿತ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿತ್ತು. ಆದರೆ ಆದರೆ ಇದೀಗ 12ನೇ ತರಗತಿಯಲ್ಲಿ ಕೇವಲ ಗಣಿತಶಾಸ್ತ್ರ ಕಲಿತವರಿಗೂ ಅವಕಾಶ ಕಲ್ಪಿಸಲಾಗಿದೆ. ಈ ವಾಹಿನಿಗೆ ಪ್ರವೇಶ ಪಡೆಯುವ ಆಕಾಂಕ್ಷಿಗಳು ಡ್ರಾಯಿಂಗ್ ಪರೀಕ್ಷೆ ತೆಗೆದುಕೊಳ್ಳುವ ಅಗತ್ಯ ಇರುವುದಿಲ್ಲ. ಇದು ವಾಸ್ತುಶಿಲ್ಪ ಆಕಾಂಕ್ಷಿಗಳಿಗಷ್ಟೇ ಸೀಮಿತವಾಗಿರುತ್ತದೆ.

ಈ ಬದಲಾವಣೆಗಳಿಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸೋಮವಾರ ಅನುಮೋದನೆ ನೀಡಿದ್ದು, ಮಂಗಳವಾರದಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಜೆಇಇ ಪರೀಕ್ಷೆಯ ಪ್ರಶ್ನೆಗಳನ್ನು ಕಡಿತಗೊಳಿಸಲಾಗಿದ್ದು, ಪ್ರಶ್ನಾ ವಿಧಾನವನ್ನೂ ಬದಲಿಸಲಾಗಿದೆ. ಈ ಮೊದಲು ಗಣಿತ, ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದ ತಲಾ 30 ಬಹು ಆಯ್ಕೆಯ ಪ್ರಶ್ನೆಗಳಿದ್ದವು. ಇದೀಗ ತಲಾ 25 ಪ್ರಶ್ನೆಗಳು ಇರುತ್ತವೆ. ಈಪೈಕಿ 20 ಎಂಸಿಕ್ಯೂ ಪ್ರಶ್ನೆಗಳು ಹಾಗೂ 5 ಸಂಖ್ಯಾ ಉತ್ತರದ ಪ್ರಶ್ನೆಗಳು ಆಗಿರುತ್ತವೆ. ಮೂರೂ ವಿಷಯಗಳಿಗೆ ಸಮಾನ ಆದ್ಯತೆ ನೀಡಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News