ದಿಗ್ವಿಜಯ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲು

Update: 2019-09-03 09:10 GMT

ಇಂದೋರ್, ಸೆ.3: ಬಿಜೆಪಿಗೆ ಐಎಸ್‌ಐ ಜೊತೆ ನಂಟು ಇದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನೀಡಿದ್ದರೆನ್ನಲಾದ ಹೇಳಿಕೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘‘ಬಿಜೆಪಿ ಹಾಗೂ ಬಜರಂಗದಳ ಪಾಕಿಸ್ತಾನದ ಕುಖ್ಯಾತ ಗುಪ್ತಚರ ಏಜೆನ್ಸಿ ಐಎಸ್‌ಐನಿಂದ ಹಣ ಪಡೆಯುತ್ತಿದೆ, ಮುಸ್ಲಿಮರಿಗಿಂತ ಹೆಚ್ಚಾಗಿ ಮುಸ್ಲಿಮೇತರರು ಪಾಕಿಸ್ತಾನಕ್ಕಾಗಿ ಗೂಢಚರ್ಯೆ ನಡೆಸುತ್ತಿದ್ದಾರೆ’’ ಎಂದು ದಿಗ್ವಿಜಯ್ ಸಿಂಗ್ ಶನಿವಾರ ಭಿಂಡ್ ನಲ್ಲಿ ಸುದ್ದಿಗಾರರ ಜತೆ ಮಾತನಾಡುವಾಗ ಹೇಳಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಿಂಗ್ ವಿರುದ್ಧ   ಬಿಜೆಪಿ ನಾಯಕರೊಬ್ಬರು ದಾಖಲಿಸಿರುವ ದೂರಿನನ್ವಯ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಿಜೆಪಿಯ ಸಂಭಲ್ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ್ ಅರೋರ ಚಂದೌಸಿ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ನಡೆಸಲು ಎಸ್‌ಐ ರಾಜೇಶ್ ಕುಮಾರ್ ಪಾಂಡೆಗೆ ಸೂಚಿಸಲಾಗಿದೆ ಎಂಬ ಮಾಹಿತಿಯಿದೆ.

ತಮ್ಮ ಹೇಳಿಕೆಗಳ ಬಗ್ಗೆ ಸುದ್ದಿ ವಾಹಿನಿಗಳು ಸಂಪೂರ್ಣ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದೆ ಎಂದು ಸಿಂಗ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News