ಮುಂಬೈನಲ್ಲಿ ಭಾರೀ ಮಳೆ: ಶಾಲಾ-ಕಾಲೇಜ್ ಗಳು ಬಂದ್
Update: 2019-09-04 11:25 IST
ಮುಂಬೈ, ಸೆ.4: ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಮಹಾನಗರದ ಹಲವು ಭಾಗಗಳಲ್ಲಿ ಜಲಾವೃತವಾಗಿದ್ದು,, ಟ್ರಾಫಿಕ್ ಅಡಚಣೆ ಉಂಟಾಗಿದೆ., ಬೆಳಗ್ಗಿನ ಲೋಕಲ್ ರೈಲಿನ ಸಂಚಾರವೂ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಮಹಾನಗರದ ಶಾಲಾ-ಕಾಲೇಜುಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಹವಾಮಾನ ಇಲಾಖೆ ಮುಂದಿನ ಎರಡು ದಿನಗಳ ಕಾಲ ಮುಂಬೈನಲ್ಲಿ ಭಾರೀ ಮಳೆ ಸುರಿಯುವ ಸೂಚನೆಯಾಗಿ ಆರೆಂಜ್ ಅಲರ್ಟ್ನ್ನು ಘೋಷಿಸಿತ್ತು. ಹೀಗಾಗಿ ಬುಧವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಭಾರೀ ಮಳೆಯಿಂದಾಗಿ ಮುಂಬೈನ ಸೆಂಟ್ರಲ್ ರೈಲ್ವೆಯ ಉಪನಗರ ರೈಲುಗಳು 10ರಿಂದ 12 ನಿಮಿಷಗಳ ಕಾಲ ವಿಳಂಬವಾಗಿ ಸಂಚರಿಸುತ್ತಿವೆ.ಹರ್ಬನ್ ಲೈನ್ ರೈಲುಗಳು 10 ನಿಮಿಷ ತಡವಾಗಿ ಓಡುತ್ತಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಮಳೆಯಿಂದಾಗಿ ಶಿವಛತ್ರಪತಿ ಅಂತರ್ರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಪ್ರಮುಖ ಏರ್ ಟ್ರಾಫಿಕ್ ಅಡಚಣೆಯಾಗಿರುವ ಬಗ್ಗೆ ವರದಿಯಾಗಿಲ್ಲ.