ಅಸ್ಸಾಂ ಎನ್‌ಆರ್‌ಸಿ: ಸಂಯೋಜಕನ ವಿರುದ್ಧ ಎಫ್‌ಐಆರ್ ದಾಖಲು

Update: 2019-09-04 14:58 GMT

ಗುವಾಹಟಿ, ಸೆ. 4: ಭಾರೀ ವೆಚ್ಚ ತೋರಿಸಿದ ಬಳಿಕ ನಕಲಿ ದಾಖಲೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಸಂಯೋಜಕ ಪ್ರತೀಕ್ ಹಜೇಲಾ ಅವರ ವಿರುದ್ಧ ಅಸ್ಸಾಂನ ಮುಸ್ಲಿಂ ಸಂಘಟನೆ ಎಫ್‌ಐಆರ್ ದಾಖಲಿಸಿದೆ.

ಅಸ್ಸೋಂ ಗಾರಿಯಾ-ಮಾರಿಯಾ ಯುಬಾ ಛಾತ್ರ ಪರಿಷದ್ ಗುವಾಹಟಿಯ ಲಟಾಸಿಲ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಎಫ್‌ಐಆರ್ ದಾಖಲಿಸಿದೆ. ಈ ಸಂಘಟನೆ ಅಸ್ಸಾಂನ ಮುಸ್ಲಿಮರ ಎರಡು ವರ್ಗಗಳಾದ ಗಾರಿಯಾ ಹಾಗೂ ಮಾರಿಯಾರನ್ನು ಪ್ರತಿನಿಧಿಸುತ್ತದೆ.

‘‘ಹಜೇಲಾ ವಿರುದ್ಧ ದೂರು ದಾಖಲಿಸಲಾಗಿದೆ. ಎನ್‌ಆರ್‌ಸಿ ಪರಿಷ್ಕರಣೆ ಕಾರ್ಯದ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ಸರಕಾರ ತನಿಖೆ ನಡೆಸಲಿದೆ’’ ಎಂದು ಸಂಘಟನೆಯ ವಕ್ತಾರ ತಿಳಿಸಿದ್ದಾರೆ.

ಹಜೇಲಾ ವಿರುದ್ಧ ಎಫ್‌ಐಆರ್ ದಾಖಲಿಸಿರುವುದನ್ನು ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಉಪೇನ್ ಕಾಲಿಟಾ ದೃಢಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News