×
Ad

2022ರ ಕಾಮನ್‌ವೆಲ್ತ್ ಗೇಮ್ಸ್ ಶೂಟಿಂಗ್ ಸೇರ್ಪಡೆಗೆ ಇಂಗ್ಲೆಂಡ್ ಕ್ರೀಡಾ ಕಾರ್ಯದರ್ಶಿಗೆ ರಿಜಿಜು ಪತ್ರ

Update: 2019-09-04 22:57 IST

ಹೊಸದಿಲ್ಲಿ, ಸೆ.4: ಬರ್ಮಿಂಗ್‌ಹ್ಯಾಮ್ ಆತಿಥ್ಯದಲ್ಲಿ 2022ರಲ್ಲಿ ನಡೆಯುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮಧ್ಯ ಪ್ರವೇಶಿಸಬೇಕೆಂದು ಆಗ್ರಹಿಸಿ ಇಂಗ್ಲೆಂಡ್ ಕ್ರೀಡಾ ಕಾರ್ಯದರ್ಶಿ ನಿಕ್ ಮೊರ್ಗನ್‌ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಪತ್ರ ಬರೆದಿದ್ದಾರೆ.

1974ರ ಬಳಿಕ ಮೊದಲ ಬಾರಿ ಸರಕುಸಾಗಣೆ ವಿಚಾರವನ್ನು ಮುಂದಿಟ್ಟು ಕೊಂಡು ಗೇಮ್ಸ್‌ನಿಂದ ಶೂಟಿಂಗ್‌ನ್ನು ಕೈಬಿಡಲಾಗಿದೆ. ಗೇಮ್ಸ್‌ನಲ್ಲಿ ಶೂಟಿಂಗ್ ಕಡ್ಡಾಯ ಕ್ರೀಡೆಯಲ್ಲ ಎಂದು ಕಾಮನ್‌ವೆಲ್ತ್ ಗೇಮ್ಸ್ ಒಕ್ಕೂಟದ ಅಧ್ಯಕ್ಷ ಲೂಯಿಸ್ ಮಾರ್ಟಿನ್ ಸಮರ್ಥಿಸಿಕೊಂಡಿದ್ದಾರೆ.

 ಕಾಮನ್‌ವೆಲ್ತ್ ಗೇಮ್ಸ್‌ನ ಶೂಟಿಂಗ್ ಕ್ರೀಡೆಯಲ್ಲಿ ಭಾರತ ಪ್ರತಿಬಾರಿಯೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. 2022ರ ಗೇಮ್ಸ್‌ನಿಂದ ಶೂಟಿಂಗ್‌ನ್ನು ಕೈಬಿಟ್ಟಿರುವುದು ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಿರ್ಧಾರವನ್ನು ಮರು ಪರಿಗಣಿಸದೇ ಇದ್ದರೆ ಗೇಮ್ಸ್ ನಿಂದ ಬಹಿಷ್ಕರಿಸುವ ಬೆದರಿಕೆಯನ್ನು ಐಒಸಿ ಹಾಕಿದೆ.

‘‘ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ 2022ರ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಶೂಟಿಂಗ್ ಸೇರ್ಪಡೆಯಾಗುವ ವಿಚಾರದಲ್ಲಿ ತಾವು ವೈಯಕ್ತಿಕವಾಗಿ ಮಧ್ಯಪ್ರವೇಶಿಸಬೇಕೆಂದು ಪತ್ರದ ಮೂಲಕ ವಿನಂತಿಸುತ್ತೇನೆ’’ ಎಂದು ಮೊರ್ಗನ್‌ಗೆ ಬರೆದ ಪತ್ರದಲ್ಲಿ ರಿಜಿಜು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News