ದಿಲ್ಲಿ, ಬುಲ್ಸ್‌ಗೆ ರೋಚಕ ಜಯ
Update: 2019-09-04 23:18 IST
ಬೆಂಗಳೂರು, ಸೆ.4: ದಬಾಂಗ್ ದಿಲ್ಲಿ ಹಾಗೂ ಬೆಂಗಳೂರು ಬುಲ್ಸ್ ತಂಡಗಳು ಪ್ರೊ ಕಬಡ್ಡಿ ಲೀಗ್‌ನಲ್ಲಿ ಬುಧವಾರ ರೋಚಕ ಜಯ ದಾಖಲಿಸಿವೆ.
ಲೀಗ್‌ನ 73ನೇ ಪಂದ್ಯದಲ್ಲಿ ದಿಲ್ಲಿ ತಂಡ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 46-44 ಅಂಕಗಳ ಅಂತರದಿಂದ ಮಣಿಸಿತು. ನವೀನ್ ಕುಮಾರ್(16 ಅಂಕ)ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಲೀಗ್‌ನ 74ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಪಾಟ್ನಾ ಪೈರೇಟ್ಸ್ ವಿರುದ್ಧ 40-39 ಅಂಕಗಳ ಅಂತರದಿಂದ ರೋಚಕ ಜಯ ದಾಖಲಿಸಿತು. ಬುಲ್ಸ್ ಪರ 17 ಅಂಕ ಗಳಿಸಿದ ಪವನ್ ಕುಮಾರ್ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಪಾಟ್ನಾದ ಪರ ಪರ್ದೀಪ್ ನರ್ವಾಲ್ 14 ಅಂಕ ಕಲೆ ಹಾಕಿದರು. ತಾನಾಡಿದ 14ನೇ ಪಂದ್ಯದಲ್ಲಿ 8ನೇ ಗೆಲುವು ದಾಖಲಿಸಿದ ಬುಲ್ಸ್ ಒಟ್ಟು 43 ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ದಿಲ್ಲಿ ತಂಡ ತಾನಾಡಿದ 12ನೇ ಪಂದ್ಯದಲ್ಲಿ 10ನೇ ಜಯ ಗಳಿಸಿ ಒಟ್ಟು 54 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ.