ಕಲ್ಲಡ್ಕ: ಎಸ್ಕೆಎಸ್ಸೆಸ್ಸೆಫ್ ನಿಂದ ಶಾಲಾ ಪರಿಸರ ಸ್ವಚ್ಛತೆ ಕಾರ್ಯಕ್ರಮ

Update: 2019-09-05 05:04 GMT

ವಿಟ್ಲ, ಸೆ.5: ಎಸ್ಕೆಎಸ್ಸೆಸ್ಸೆಫ್ ಕಲ್ಲಡ್ಕ ಶಾಖೆಯ ವತಿಯಿಂದ ಇಲ್ಲಿನ ದ.ಕ. ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪರಿಸರದಲ್ಲಿ ಇತ್ತೀಚೆಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು. 

ಶಾಲೆಯ ತ್ಯಾಜ್ಯ ಸಂಗ್ರಹಕ್ಕಾಗಿ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಎರಡು ಬಕೆಟ್ ಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ಹಸ್ತಾಂತರಿಸಲಾಯಿತು. 
ಈ ಸಂದರ್ಭ ಶಾಲೆಯ ವತಿಯಿಂದ ಶಾಲಾ ಮುಖ್ಯ ಶಿಕ್ಷಕ ಅಶ್ರಫ್ ಅವರು ಸಂಘಟನೆಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಿದರು.

 ಸಂಘದ ಗೌರವಾದ್ಯಕ್ಷ ಹಾಜಿ ಜಿ.ಅಹ್ಮದ್ ಯೂಸುಫ್ ಗೋಳ್ತಮಜಲು, ಅದ್ಯಕ್ಷ ಇಕ್ಬಾಲ್ ಸಿ.ಎಂ., ಕಾರ್ಯದರ್ಶಿ ಹಾಫಿಲ್ ಎಂ.ಎಸ್., ಕೋಶಾಧಿಕಾರಿ ನಿಹಾನ್ ಮುಹಮ್ಮದ್, ಸ್ವದಕತುಲ್ಲಾ ಫೈಝಿ, ಖಾಸಿಂ ಕಲ್ಲಡ್ಕ, ಸಮದ್ ಮದಕ, ಶಾಲಾ ಸಹ ಶಿಕ್ಷಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News