ಪ್ಲಾಸ್ಟಿಕ್ ನಿಷೇಧ: ಮನಪಾದಿಂದ ಮುಂದುವರಿದ ದಾಳಿ

Update: 2019-09-05 12:56 GMT

ಮಂಗಳೂರು, ಸೆ.5: ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಅಂಗಡಿ ಮುಂಗಟ್ಟುಗಳಿಗೆ ದಾಳಿ ಮುಂದುವರಿದ್ದು, ಮೂರು ದಿನಗಳಲ್ಲಿ ಒಟ್ಟು 71,400 ರೂ. ದಂಡವನ್ನು ಸಂಗ್ರಹಿಸಲಾಗಿದೆ.

ಸೆ. 3 ಮಂಗಳವಾರ ಸೆಂಟ್ರಲ್ ಮಾರುಕಟ್ಟೆ, ಕದ್ರಿ, ಶಿವಬಾಗ್, ಕೊಟ್ಟಾರ ಪ್ರದೇಶಗಳಲ್ಲಿ 45 ಅಂಗಡಿಗಳಿಗೆ ದಾಳಿ ನಡೆಸಿ ನಿಷೇಧಿತ 113.50 ಕೆಜಿ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡಿದೆ. ಇದೇ ವೇಳೆ ಒಟ್ಟು 22850 ರೂ. ದಂಡಗಳನ್ನು ಸಂಗ್ರಹಿಸಿದೆ. ಬುಧವಾರ ಸ್ಟೇಟ್‌ಬ್ಯಾಂಕ್ ಹಾಗೂ ಲಾಲ್‌ಬಾಗ್ ಪ್ರದೇಶದ 9 ಅಂಗಡಿಗಳಿಗೆ ದಾಳಿ ನಡೆಸಿ 33 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು 11,800 ರೂ. ದಂಡ ಸಂಗ್ರಹಿಸಿದೆ. ಗುರುವಾರ ವೆಲೆನ್ಸಿಯಾ, ಪಂಪ್‌ವೆಲ್, ಬೆಂದೂರು, ಕರಂಗಲ್ಪಾಡಿ, ಬಿಜೈ ಹಾಗೂ ಸುರತ್ಕಲ್‌ಗಳಲ್ಲಿ ಮನಪಾ ಅಧಿಕಾರಿಗಳ ತಂಡ ದಾಳಿ ನಡೆಸಿ 83.37 ಕೆಜಿ ನಿಷೇಧಿತ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು 36,750 ರೂ. ದಂಡ ಸಂಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News