ಜಮೀಯ್ಯತುಲ್ ಫಲಾಹ್ ಕಾಪು: ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್

Update: 2019-09-05 13:38 GMT

ಕಾಪು : ಜಮೀಯ್ಯತುಲ್ ಫಲಾಹ್(ರಿ) ಕಾಪು ತಾಲೂಕು ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಅದಮ್ ಮಜೂರ್ ಆಯ್ಕೆಯಾದರು. ಇತ್ತೀಚೆಗೆ ಸಮಿತಿಯ ಕಚೇರಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ.  

ಉಪಾಧ್ಯಕ್ಷರಾಗಿ ಮುಹಮ್ಮದ್ ಸಾದಿಕ್ ದಿನಾರ್ ಕಾಪು ಮತ್ತು ಶಬ್ಬೀರ್ ಹುಸೈನ್ ಪಡುಬಿದ್ರಿ, ಕಾರ್ಯದರ್ಶಿಯಾಗಿ ಶೇಕ್ ಶಾಬಿರ್ ಅಲಿ, ಜತೆ ಕಾರ್ಯದರ್ಶಿಯಾಗಿ ನಸೀರ್ ಅಹಮದ್ ಎಕ್ಕಾವನ್, ಕೋಶಾಧಿಕಾರಿಯಾಗಿ ಶಬೀ ಅಹಮದ್ ಕಾಜೀ, ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಸುಲೇಮಾನ್ ಇಂಜಿನಿಯರ್, ಮಾದ್ಯಮ ಕಾರ್ಯದರ್ಶಿ ಅನ್ವರ್ ಅಲಿ ಕಾಪು ಅವಿರೋಧವಾಗಿ ಆಯ್ಕೆಗೊಂಡರು.

ಅಧ್ಯಕ್ಷತೆಯನ್ನು ಶಭೀ ಅಹಮದ್ ಕಾಜಿರವರ ಅಧ್ಯಕ್ಷತೆಯನ್ನು ನಡೆಯಿತು. 

ಕೇಂದ್ರ ಸಮಿತಿಯ ಅಧ್ಯಕ್ಷ ಕೆ. ಕೆ. ಶಾಹುಲ್ ಹಮೀದ್ ಕಾಪು ಘಟಕ ಪ್ರಥಮ ಅವದಿಯಲ್ಲಿ ಗಣನೀಯ ಚಟುವಟಿಕೆಗಳನ್ನು ನಿರ್ವಹಿಸಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿ ತಂದು ನಿಲ್ಲಿಸಿದೆ. ಇದೇ ಹುರುಪು ಮುಂದಿನ ದಿನಗಳಲ್ಲೂ ಇರಲಿ ಎಂದು ಹಾರೈಸಿದರು.

ಉಡುಪಿ ತಾಲೂಕು ಅಧ್ಯಕ್ಷರಾದ ಕಾಸಿಂ ಬಾರ್ಕೂರು, ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ನ ಸಲಹಾ ಸಮಿತಿಯ ಛೇರ್ಮನ್ ಇಬ್ರಾಹಿಂ ಮಟ್ ಪಾಡಿ , ಅಲ್ ಹಾಜ್ ಅಬ್ದುಲ್ ಜಲೀಲ್ ಉದ್ಯಾವರ , ಏನ್ ಆರ್ ಸಿ ಸಿ ಸದಸ್ಯ ಮುಹಮ್ಮದ್ ರಫೀಕ್ ಅತ್ತಾವರ, ಜೆ ಯೆಫ್ ಸಿ ಸಿ ಹಾಸ್ಟೆಲ್ ಕಮಿಟಿ ಸಂಚಾಲಕ ಇಕ್ಬಾಲ್ ಬಂಟ್ವಾಳ , ಜೆ ಎಫ್ ಸಿ ಸಿ ಮನೇಜರ್ ಆದಂ ಬ್ಯಾರಿ ಉಪಸ್ಥಿತರಿದ್ದರು. 

ವರದಿಯನ್ನು ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ವಾಚಿಸಿದರು. ಲೆಕ್ಕ ಪತ್ರ ವನ್ನು ಕೋಶಾಧಿಕಾರಿ ಮುಷ್ತಾಕ್ ಇಬ್ರಾಹಿಂ ಮಂಡಿಸಿದರು. ಕೆ ರಫೀಕ್ ಅಹಮದ್ ಕುರ್ ಆನ್ ಪಠಿಸಿದರು. ಮುಹಮ್ಮದ್ ಇಕ್ಬಾಲ್ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News