ಜಿಲ್ಲಾ ಮಟ್ಟದ ಥ್ರೋಬಾಲ್: ಇಂದ್ರಪ್ರಸ್ಥ ವಿಭಾಗೀಯ ಮಟ್ಟಕ್ಕೆ

Update: 2019-09-05 14:07 GMT

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಮತ್ತು ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಶಾಲೆ ಸಾಲ್ಮರ ಇವರ ಸಹಯೋಗದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ- ಬಾಲಕಿಯರ ಥ್ರೋಬಾಲ್ ಪಂದ್ಯಾಟದ ಪ್ರಾಥಮಿಕ ವಿಭಾಗದಲ್ಲಿ ಇಂದ್ರಪ್ರಸ್ಥ ವಿದ್ಯಾಲಯದ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು, ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ. 

ಈ ತಂಡವನ್ನು ಅನೂಪ್ ಶೆಣೈ, ಮಹಮ್ಮದ್ ಸಫ್ವಾನ್, ಯಕ್ಷಿತ್, ಶ್ರವಣ್ ಕೆ., ವೈಭವ್ ಕೆ., ಮಹಮ್ಮದ್ ಐಮಾನ್ ಶಾಫಿ, ಆಲಿ ಅಫ್ತಾಬ್, ಭುವನ್ ಬೆದ್ರ ಕೆ., ಹೃಷಿಕೇಶ್ ನಾಯಕ್, ಸುಶಾಂತ್ ಕೆ. ಎಸ್., ಮಹಮ್ಮದ್ ರೈಫ್, ಅಹ್ಸನ್ ವದೂದ್, ರಚನ್ ಆರ್ ಕೆ., ಮಹಮ್ಮದ್ ನಶಿಕ್, ಆಯುಷ್ ರೈ, ಮಿಥುನ್ ವಿ.ಕೆ ರವರು ಪ್ರತಿನಿಧಿಸುತ್ತಿದ್ದು, ಅನೂಪ್ ಶೆಣೈ ಉತ್ತಮ ಸವ್ಯಸಾಚಿಯಾಗಿ ಮೂಡಿಬಂದಿದ್ದಾರೆ. ಇವರಿಗೆ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕರಾದ ವಿಜೇತ್ ಕುಮಾರ್ ಮತ್ತು ಶ್ರೀಮತಿ ವಿದ್ಯಾ ತರಬೇತುಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News