ಉಳ್ಳಾಲ: 30 ವರ್ಷಗಳ ಹಿಂದಿನ ಹಲ್ಲೆ ಪ್ರಕರಣ; ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

Update: 2019-09-05 14:24 GMT

ಉಳ್ಳಾಲ: ಮೂರು ದಶಕಗಳ ಹಿಂದೆ ಕಿನ್ಯದಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಉಳ್ಳಾಲ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಬೆಳರಿಂಗೆ ನಿವಾಸಿ ಶೇಖಬ್ಬ ಎಂದು ಗುರುತಿಸಲಾಗಿದೆ.

ಶೇಖಬ್ಬ ಮತ್ತು ಮಹಮ್ಮದ್ ಎಂಬಿಬ್ಬರು ಸೇರಿ 1989 ನವಂಬರ್ 22ರಂದು ಪೋಕರ್ ಬ್ಯಾರಿ ಎಂಬವರ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಶೇಖಬ್ಬ ತಲೆಮರೆಸಿಕೊಂಡಿದ್ದ. ಈತನನ್ನು ಪೊಲೀಸ್ ಆಯುಕ್ತ ಹರ್ಷ ಅವರ ಮಾರ್ಗದರ್ಶನದ ಮೇರೆಗೆ ಸಹಾಯಕ ಆಯುಕ್ತ ಕೋದಂಡರಾಂ ಅವರ ನಿದರ್ಶನದಂತೆ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News