ಮಂಗಳೂರು: ‘ನ್ಯೂ ರೆನೊ ಟ್ರೈಬರ್’ ಲೋಕಾರ್ಪಣೆ

Update: 2019-09-05 15:05 GMT

ಮಂಗಳೂರು, ಸೆ.5: ಪ್ರತಿಷ್ಠಿತ ರೆನೊ ಕಂಪೆನಿಯ ಏಳು ಆಸನಗಳ ಸೌಲಭ್ಯವುಳ್ಳ ‘ನ್ಯೂ ರೆನೊ ಟ್ರೈಬರ್’ ಕಾರನ್ನು ಮಂಗಳೂರು ನಗರದ ಕೂಳೂರು ರೆನೊ ಶೋರೂಂನಲ್ಲಿ ಗುರುವಾರ ಲೋಕಾರ್ಪಣೆಗೊಳಿಸಲಾಯಿತು.

ಕಾರ್ಯಕ್ರಮವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಜಿಎಂ ಎ.ಆರ್.ಮಂಜುನಾಥ ಹಾಗೂ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ರಮೇಶ್ ವರ್ಣೇಕರ್ ಉದ್ಘಾಟಿಸಿ, ನೂತನ ನ್ಯೂ ರೆನೊ ಟ್ರೈಬರ್‌ನ್ನು ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಜಿಎಂ ಎ.ಆರ್.ಮಂಜುನಾಥ, ಎಸ್‌ಬಿಐ ಎಲ್ಲ ಉದ್ಯಮಿಗಳಿಗೂ ಸಹಕಾರ ನೀಡಲಿದೆ. ರೆನಾಲ್ಟ್ ಹಾಗೂ ಎಸ್‌ಬಿಐ ನಡುವೆ ಉತ್ತಮ ಬಾಂಧವ್ಯವಿದೆ. ಲೋನ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಬ್ಯಾಂಕ್ ಸದಾ ಒಂದು ಹೆಜ್ಜೆ ಮುಂದೆ ಇರುತ್ತದೆ ಎಂದು ಹೇಳಿದರು.

ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿ ರಮೇಶ್ ವರ್ಣೇಕರ್ ಮಾತನಾಡಿ, ನ್ಯೂ ರೆನಾಲ್ಟ್ ಟ್ರೈಬರ್ ಕಾರನ್ನು ಸಾಮಾನ್ಯ ಜನರೂ ಖರೀದಿಸಬಹುದು. ಕಾರು ಉದ್ಯಮದಲ್ಲಿ ರೆನೊ ವಾಹನಗಳ ಮಾರಾಟದಲ್ಲಿ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಸಂಚಾರ ನಿಯಮ ಪಾಲಿಸಿ ಕಾರು ಚಲಾಯಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಿಸ್ ಕರ್ನಾಟಕ ಇಂಟರ್ ನ್ಯಾಶನಲ್ ಪ್ರಶಸ್ತಿ ಪುರಸ್ಕೃತೆ ಭುವನಾ ಶಿವಕುಮಾರ್, ತುಳು ಚಿತ್ರರಂಗದ ನಾಯಕ ನಟ ಅರ್ಜುನ್ ಕಾಪಿಕಾಡ್, ನಟ ಮಣಿಕಾಂತ್ ಕದ್ರಿ, ಡೈಜಿ ವರ್ಲ್ಡ್‌ನ ಸಿಇಒ ವಾಲ್ಟರ್ ನಂದಳಿಕೆ, ಮಂಗಳೂರು ರೆನಾಲ್ಟ್ ಶೋರೂಂನ ನಿರ್ದೇಶಕ ಅರುಣ್ ಮೆಂಡಿಸ್, ವ್ಯವಸ್ಥಾಪಕ ನಿರ್ದೇಶಕ ಮಿಥುನ್ ಚೌಟರ್, ಏರಿಯಾ ಸೇಲ್ಸ್ ಮ್ಯಾನೇಜರ್ ಮಣಿವಣ್ಣನ್, ಎಚ್‌ಆರ್ ಜೈದೀಪ್ ಅಮೀನ್, ಬ್ಯುಸಿನೆಸ್ ಹೆಡ್ ಮುಹಮ್ಮದ್ ರಿಝ್ವಾನ್, ಸರ್ವಿಸ್ ಹೆಡ್ ಗಿರೀಶ್‌ಕುಮಾರ್, ಜೆನಿಫರ್ ಮೆಂಡಿಸ್, ನಿಧಿ ಚೌಟರ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ರೆನೊ ಶೋರೂಂನ ಹರಿಪ್ರಸಾದ್ ಪ್ರಾರ್ಥಿಸಿದರು. ಶ್ರುತಿ ಜೈನ್ ಸ್ವಾಗತಿಸಿದರು. ಮಾಧುರಿ ರೆನಾಲ್ಟ್ ಟ್ರೈಬರ್ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು. ನಯನಾ ವಂದಿಸಿದರು. ಪಲ್ಲವಿ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News