×
Ad

ನಡಾಲ್ ಸೆಮಿ ಫೈನಲ್‌ಗೆ ಲಗ್ಗೆ

Update: 2019-09-05 23:50 IST

ನ್ಯೂಯಾರ್ಕ್, ಸೆ.5: ಡಿಯಾಗೊ ಸ್ಚೆವರ್ಟ್ಝ್‌ಮನ್‌ರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ಸೂಪರ್‌ಸ್ಟಾರ್ ರಫೆಲ್ ನಡಾಲ್ ಯು.ಎಸ್. ಓಪನ್ ಟೆನಿಸ್ ಟೂರ್ನ ಮೆಂಟ್‌ನಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.

ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಡಿಯಾಗೊರನ್ನು ನಡಾಲ್ 6-4, 7-5, 6-2 ಸೆಟ್‌ಗಳಿಂದ ಸೋಲಿಸಿದ್ದಾರೆ. ಪ್ರಶಸ್ತಿ ಫೇವರಿಟ್‌ಗಳಾದ ರೋಜರ್ ಫೆಡರರ್ ಹಾಗೂ 2018ರ ಚಾಂಪಿಯನ್ ನೊವಾಕ್ ಜೊಕೊವಿಕ್ ಈಗಾಗಲೇ ಟೂರ್ನಿಯಲ್ಲಿ ಸೋಲನುಭವಿಸಿ ನಿರ್ಗಮಿಸಿದ್ದಾರೆ. ಹೀಗಾಗಿ ನಾಲ್ಕನೇ ಯು.ಎಸ್. ಓಪನ್ ಪ್ರಶಸ್ತಿ ಜಯಿಸುವತ್ತ ದಾಪುಗಾಲಿಟ್ಟಿರುವ ನಡಾಲ್ ಅವರ ಪ್ರಶಸ್ತಿ ಹಾದಿಯಲ್ಲಿನ ಎರಡು ತಡೆಗಳು ನಿವಾರಣೆಯಾಗಿದೆ. ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಆರನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಮಣಿಸಿದ್ದ ಡಿಯಾಗೊ ಈ ಹಿಂದೆ ನಡಾಲ್‌ರೊಂದಿಗೆ ತರಬೇತಿ ನಡೆಸಿದ್ದರು. ನಡಾಲ್ ಮೇಲೆ ಅಪಾರ ಗೌರವ ಇರಿಸಿಕೊಂಡಿದ್ದಾರೆ. ನಡಾಲ್ ಸೆಮಿ ಫೈನಲ್‌ನಲ್ಲಿ ಇಟಲಿಯ ಬಿಗ್ ಹಿಟ್ಟರ್ ಮಟೆಯೊ ಬೆರೆಟ್ಟಿನಿ ಅವರನ್ನು ಎದುರಿಸಲಿದ್ದಾರೆ. ಬೆರೆಟ್ಟಿನಿ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಫ್ರಾನ್ಸ್‌ನ ಗಯೆಲ್ ಮೊನ್‌ಫಿಲ್ಸ್‌ರನ್ನು ಮಣಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News