ಉಡುಪಿ: ಸುಲ್ತಾನ್ ಡೈಮೆಂಡ್ಸ್ ಆ್ಯಂಡ್ ಗೋಲ್ಡ್‌ನಿಂದ ಶಿಕ್ಷಕರ ದಿನಾಚರಣೆ

Update: 2019-09-06 05:43 GMT

ಉಡುಪಿ, ಸೆ.6: ಸುಲ್ತಾನ್ ಡೈಮೆಂಡ್ಸ್ ಆ್ಯಂಡ್ ಗೋಲ್ಡ್ ಉಡುಪಿ ಶೋರೂಂ ವತಿಯಿಂದ ಗುರುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭ ಇಲ್ಲಿನ ಆಶಾ ನಿಲಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಜಯವಿಜಯಾ, ಸಹ ಶಿಕ್ಷಕಿಯರಾದ ಸರೋಜಿನಿ ಕರ್ಕಡ ಹಾಗೂ ಶಶಿಕಲಾ ಕೋಟ್ಯಾನ್ ಅವರನ್ನು ಸಂಸ್ಥೆಯ ಬ್ರಾಂಚ್ ಮ್ಯಾನೇಜರ್ ಮುಹಮ್ಮದ್ ಅಜ್ಮಲ್ ಸನ್ಮಾನಿಸಿದರು.

ಸೇಲ್ಸ್ ಮ್ಯಾನೇಜರ್ ಮುಹಮ್ಮದ್ ಇಕ್ಬಾಲ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಸಂಸ್ಥೆಯ ಫ್ಲೋರ್ ಮ್ಯಾನೇಜರ್ ಸಿದ್ದೀಕ್ ಹಸನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News