ಸೆ.8: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವ್ಯಾಪ್ತಿಯಲ್ಲಿ 3 ರಕ್ತದಾನ ಶಿಬಿರ

Update: 2019-09-06 09:16 GMT

ಸುರತ್ಕಲ್, ಸೆ.6: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವ್ಯಾಪ್ತಿಯ 3  ಸೆಕ್ಟರ್ ಗಳಲ್ಲಿ ಸೆ.8ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ ಇದರ 112ನೇ ರಕ್ತದಾನ ಶಿಬಿರವು ಸೆ.8ರಂದು ಸುರತ್ಕಲ್ ಸೆಕ್ಟರ್ ಮತ್ತು ಮುಕ್ಕ ಶಾಖೆಯ ವತಿಯಿಂದ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿನ ಸಹಭಾಗಿತ್ವದಲ್ಲಿ ಮುಕ್ಕದ ಅಂಜುಮಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಲಿದೆ.

 113ನೇ ರಕ್ತದಾನ ಶಿಬಿರವು ಕಾಟಿಪಳ್ಳ ಸೆಕ್ಟರ್ ವತಿಯಿಂದ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜಿನ ಸಹಭಾಗಿತ್ವದಲ್ಲಿ ಕಾಟಿಪಳ್ಳದ ಜಾಸ್ಮೀನ್ ಮಹಲ್ ನಲ್ಲಿ ನಡೆಯಲಿದೆ.

114ನೇ ರಕ್ತದಾನ ಶಿಬಿರವು ಮುಲ್ಕಿ ಸೆಕ್ಟರ್ ವತಿಯಿಂದ ವೆನ್ಲಾಕ್ ಆಸ್ಪತ್ರೆ, ಮಂಗಳೂರು ಇದರ ಸಹಭಾಗಿತ್ವದಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News