×
Ad

ದೇಶೀ ನಿರ್ಮಿತ ಮುಂಬೈ ಮೆಟ್ರೋ ಕೋಚ್ ಉದ್ಘಾಟಿಸಿದ ಪ್ರಧಾನಿ ಮೋದಿ

Update: 2019-09-07 14:45 IST

ಮುಂಬೈ, ಸೆ.7: ಮುಂಬೈನ ಮೆಟ್ರೋ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಡಿ ಸ್ಥಳೀಯವಾಗಿ ನಿರ್ಮಿಸಲಾಗಿರುವ ವಿಶೇಷ ಮೆಟ್ರೋ ಕೋಚ್‌ನ್ನು ಉದ್ಘಾಟಿಸಿದರು.

ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಮುಂಬೈಗೆ ಪ್ರಧಾನಿ ಭೇಟಿ ನೀಡಿದರು. ಈ ವೇಳೆ 20,000 ಕೋಟಿ ರೂ.ಗೂ ಅಧಿಕ ಯೋಜನೆಗಳನ್ನು ಉದ್ಘಾಟಿಸಿದರು.

ಮೆಟ್ರೋ ಲೈನ್ 10(ಗೈಮುಖ್-ಶಿವಾಜಿ ಚೌಕ್), ಲೈನ್ 11(ವಡಾಲ-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್) ಹಾಗೂ ಲೈನ್ 12(ಕಲ್ಯಾಣ್-ತಲೋಜಾ) ಹಾಗೂ ಅರೇ ಕಾಲನಿಯಲ್ಲಿ ಪ್ರಸ್ತಾವಿತ ಮೆಟ್ರೋ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬೆಂಗಳೂರಿನ ಭಾರತ್ ಅರ್ಥ್ ಮೂವರ್ಸ್(ಬೆಮೆಲ್)ಸಂಸ್ಥೆ ಕೇವಲ 75 ದಿನಗಳಲ್ಲಿ ರೈಲ್ವೆ ಕೋಚ್ ನಿರ್ಮಾಣ ಮಾಡಿದೆ. ಮುಂಬೈನ ಮೆಟ್ರೋ ರೈಲು ನಿಗಮವು ಇಂತಹ 500 ಕೋಚ್ ನಿರ್ಮಾಣ ಮಾಡುವ ಯೋಜನೆ ಇಟ್ಟುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News