ದೇಶದ್ರೋಹ ಪ್ರಕರಣ ರಾಜಕೀಯ ಪ್ರೇರಿತ: ಶೆಹ್ಲಾ ರಶೀದ್

Update: 2019-09-07 14:43 GMT

ಹೊಸದಿಲ್ಲಿ, ಸೆ. 6: ‘ಜಮ್ಮು ಹಾಗೂ ಕಾಶ್ಮೀರ ಪೀಪಲ್ಸ್ ಮೂವ್‌ಮೆಂಟ್’ನ ನಾಯಕಿ ಶೆಹ್ಲಾ ರಶೀದ್ ಶುಕ್ರವಾರ ತನ್ನ ವಿರುದ್ಧದ ದೇಶದ್ರೋಹದ ಪ್ರಕರಣವನ್ನು ‘ಕ್ಷುಲ್ಲಕ’, ‘ರಾಜಕೀಯ ಪ್ರೇರಿತ’ ಹಾಗೂ ತನ್ನನ್ನು ಮೌನವಾಗಿರಿಸುವ ‘ಕರುಣಾಜನಕ ಪ್ರಯತ್ನ’ ಎಂದು ವ್ಯಾಖ್ಯಾನಿಸಿದ್ದಾರೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಸೇನೆ ನಾಗರಿಕರಿಗೆ ಚಿತ್ರ ಹಿಂಸೆ ನೀಡುತ್ತಿದೆ ಹಾಗೂ ಕಣಿವೆಯ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿದೆ ಎಂದು ರಶೀದ್ ಟ್ವೀಟ್ ಮಾಡಿದ್ದರು. ಕಾಶ್ಮೀರದಲ್ಲಿ ನಿರ್ಬಂಧ ಹಾಗೂ ಕಾಶ್ಮೀರಿಗಳ ಮೂಲಭೂತ ಹಕ್ಕಿನ ನಿರಾಕರಣೆ ಕುರಿತು ಮಾತನಾಡಿರುವುದಕ್ಕೆ ನನ್ನ ವಿರುದ್ಧ ವಿಶೇಷ ಘಟಕ ಹಾಗೂ ದಿಲ್ಲಿ ಪೊಲೀಸ್ ಎಫ್‌ಐಆರ್ ದಾಖಲಿಸಿದೆ ಎಂದು ಮಾಧ್ಯಮ ವರದಿಗಳಿಂದ ತಾನು ತಿಳಿದುಕೊಂಡೆ ಅವರು ತಿಳಿಸಿದ್ದಾರೆ.

‘‘ರಾಜಕೀಯ ಹೋರಾಟಗಾರ್ತಿಯಾಗಿ ನಾನು ಕೇವಲ ನನ್ನ ಕೆಲಸ ಮಾಡಿದೆ. ಟ್ವಿಟ್ಟರ್‌ನಲ್ಲಿ ನನ್ನನ್ನು ಗುರಿಯಾಗಿರಿಸಲಾಗುತ್ತಿದೆ. ಜನರಿಗೆ ಸೌಲಭ್ಯ ನೀಡುವ ಆಡಳಿತದ ಸಕಾರಾತ್ಮಕ ಕೆಲಸಗಳನ್ನು ನಾನು ಎತ್ತಿ ತೋರಿಸಿದ್ದೇನೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News