ಮೊಗಸಾಲೆ ಪ್ರತಿಷ್ಠಾನದಿಂದ ಐವರು ಸಾಹಿತಿಗಳಿಗೆ ಪ್ರಶಸ್ತಿ

Update: 2019-09-07 17:20 GMT

ಮೂಡುಬಿದಿರೆ : ಡಾ.ನಾ. ಮೊಗಸಾಲೆ 75ರ ‘ಸಾಹಿತ್ಯ ವಿಹಾರ’ ಸರಣಿ ಕಾರ್ಯಕ್ರಮಗಳ ಸಂದರ್ಭದಲ್ಲಿ ಅವರ ಬದುಕು ಬರೆಹಗಳ ಬಗ್ಗೆ ಕೃತಿ ರಚಿಸಿಕೊಟ್ಟ ಇಲ್ಲವೇ ಅವರ ಕೃತಿಗಳ ಕುರಿತಾದ ಲೇಖನಗಳನ್ನು ಸಂಪುಟೀಕರಿಸಿದ ಐವರು ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ಮೊಗಸಾಲೆ ಪ್ರತಿಷ್ಠಾನವು ನಿರ್ಧರಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಿರಂಜನ ಮೊಗಸಾಲೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸಿದ್ಧ ಸಾಹಿತಿಗಳಾದ ಸುಬ್ರಾಯ ಚೊಕ್ಕಾಡಿ, ಡಾ.ಎಸ್.ಪಿ. ಪದ್ಮಪ್ರಸಾದ್ ಮತ್ತು ಹಿರಿಯ ಸಾಹಿತ್ಯ ಪರಿಚಾರಕರಾದ ಸದಾನಂದ ನಾರಾವಿ ಅವರಿಗೆ ‘ಸಾಹಿತ್ಯ ಶ್ರೀ’ ಪ್ರಶಸ್ತಿಯನ್ನು, ಸೃಜನಶೀಲ ಸಾಹಿತ್ಯದಷ್ಟೇ ಅನುವಾದದ ಕ್ಷೇತ್ರದಲ್ಲಿ ವಿಶೇಷವಾಗಿ ತೊಡಗಿಸಿಕೊಂಡಿರುವ ಡಾ.ಎನ್.ಟಿ. ಭಟ್ ಮತ್ತು ಡಾ.ಬಿ.ಜನಾರ್ದನ ಭಟ್ಟರಿಗೆ ‘ಅನುವಾದ ಸಾಹಿತ್ಯ ಶ್ರೀ ಪ್ರಶಸ್ತಿ’ಯನ್ನು ತಲಾ ಐದು ಸಾವಿರದ ನಗದು ಮತ್ತು ತಾಮ್ರ ಪತ್ರವನ್ನು ನೀಡಿ ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಈ ಸಮಾರಂಭವು ಸೆ. 28ರಂದು ಮೂಡುಬಿದಿರೆಯ ಎಂ.ಸಿ.ಎಸ್.ಬ್ಯಾಂಕ್ ಹಮ್ಮಿಕೊಂಡಿರುವ ಮೊಗಸಾಲೆ ಅಭಿನಂದನಾ ಸಮಾರಂಭದಲ್ಲಿ ನಡೆಯಲಿರುವುದು ಮತ್ತು ಡಾ.ಎಂ. ಮೋಹನ ಆಳ್ವ ಅವರು ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸುವರು ಎಂದು ನಿರಂಜನ ಮೊಗಸಾಲೆ ಅವರು  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News