'ಅಲ್ ಬಿರ್ರ್ ಕಿಡ್ಸ್' ಕನ್ನಡ ಆವೃತ್ತಿ ಬಿಡುಗಡೆ

Update: 2019-09-07 17:41 GMT

ಕಲ್ಲಿಕೋಟೆ : ಕರ್ನಾಟಕದ ಅಲ್ ಬಿರ್ರ್ ಪ್ರಿ ಸ್ಕೂಲ್‌ಗಳಿಗಾಗಿ ಸಿದ್ಧಪಡಿಸಲಾದ ಅಲ್ ಬಿರ್ರ್ ಕಿಡ್ಸ್ ಬಾಲ ಮಾಸಿಕದ ಕನ್ನಡ ಆವೃತ್ತಿಯನ್ನು ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಪ್ರಧಾನ ಕಾರ್ಯದರ್ಶಿ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್ ಬಿಡುಗಡೆಗೊಳಿಸಿದರು.


ಕಲ್ಲಿಕೋಟೆಯ ಸಮಸ್ತ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಲ್ ಬಿರ್ರ್ ಕರ್ನಾಟಕ ಕೋಆರ್ಡಿನೇಟರ್ ಅಕ್ಬರ್ ಅಲಿ ಅಡ್ಡೂರ್  ಅವರಿಗೆ ಮೊದಲ ಪ್ರತಿ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ದಾರುಲ್ ಹುದಾ ಯೂನಿವರ್ಸಿಟಿಯ ಉಪಕುಲಪತಿ ಡಾ. ಬಹಾಹುದ್ದೀನ್ ನದ್ವಿ ಕೂರಿಯಾಡ್,  ಅಲ್ ಬಿರ್ರ್ ಕನ್ವಿನರ್ ಉಮ್ಮರ್ ಫೈಝಿ ಮುಕ್ಕಂ, ಕೆ.  ಮೊಯಿನ್ ಕುಟ್ಟಿ ಮಾಸ್ಟರ್, ಮುಸ್ತಫಾ ಮಾಸ್ಟರ್ ಮುಂಡುಪಾರ, ಶಾಹುಲ್ ಹಮೀದ್ ಮಾಸ್ಟರ್ ಮೇಲ್ಮುರಿ, ಅಲ್ ಬಿರ್ರ್ ಆಡಳಿತ ನಿರ್ದೇಶಕ  ಕೆ.ಪಿ ಮುಹಮ್ಮದ್, ಅಲ್ ಬಿರ್ರ್ ಕಿಡ್ಸ್ ಸಂಪಾದಕ ಯೂಸುಫ್ ಮುಂಡೋಳೆ, ಕುಟ್ಟಿ ಹಸನ್ ದಾರಿಮಿ, ಇಸ್ಮಾಯಿಲ್ ಮುಜದ್ದಿದಿ ಮತ್ತು ಮೊಹಮ್ಮದ್ ಶಾಫಿ ಮೂಡಬಿದಿರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News