ಇಂಗ್ಲೆಂಡ್ 301ಕ್ಕೆ ಆಲೌಟ್

Update: 2019-09-07 18:00 GMT

ಮಾಂಚೆಸ್ಟರ್, ಸೆ. 7: ಆ್ಯಶಸ್ ಸರಣಿಯ ನಾಲ್ಕನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ 196 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ಟೆಸ್ಟ್‌ನ ನಾಲ್ಕನೇ ದಿನವಾಗಿರುವ ಇಂದು ಇಂಗ್ಲೆಂಡ್ ಮೊದಲ ಇನಿಂಗ್ಸ್ ನಲ್ಲಿ 107 ಓವರ್‌ಗಳಲ್ಲಿ 301 ರನ್‌ಗಳಿಗೆ ಆಲೌಟಾಗಿದೆ.

ಮೂರನೇ ದಿನದಾದಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 74 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 200 ರನ್ ಗಳಿಸಿದ್ದ ಇಂಗ್ಲೆಂಡ್ ಬ್ಯಾಟಿಂಗ್ ಮುಂದುವರಿಸಿ ಈ ಮೊತ್ತಕ್ಕೆ 101 ರನ್ ಸೇರಿಸಿತು.

 2 ರನ್ ಗಳಿಸಿ ಔಟಾಗದೆ ಉಳಿದಿದ್ದ ಬೆನ್ ಸ್ಟೋಕ್ಸ್ ಮತ್ತು 2 ರನ್ ಗಳಿಸಿದ್ದ ಜಾನ್ ಬೈರ್‌ಸ್ಟೋವ್ ಎರಡಂಕೆಯ ಸ್ಕೋರ್ ದಾಖಲಿಸಿ ಔಟಾದರು.

 ಬೆನ್‌ಸ್ಟೋಕ್ 26ರನ್ ಮತ್ತು ಬೈರ್‌ಸ್ಟೋವ್ 17 ರನ್ ಜಮೆ ಮಾಡಿ ನಿರ್ಗಮಿಸಿದರು. ಜೋಸ್ ಬಟ್ಲರ್ ಆಕರ್ಷಕ 41 ರನ್‌ಗಳ ಕೊಡುಗೆ ನೀಡಿದ ಕಾರಣದಿಂದಾಗಿ ಇಂಗ್ಲೆಂಡ್‌ನ ಸ್ಕೋರ್ 300ರ ಗಡಿ ದಾಟಿತು.

ಆಸ್ಟ್ರೇಲಿಯದ ಜೋಸ್ ಹೇಝಲ್‌ವುಡ್ 57ಕ್ಕೆ 4, ಮಿಚೆಲ್ ಸ್ಟಾರ್ಕ್ 80ಕ್ಕೆ 3 ಮತ್ತು ಪ್ಯಾಟ್ ಕಮಿನ್ಸ್ 60ಕ್ಕೆ 3 ವಿಕೆಟ್ ಪಡೆದರು.

ಆಸ್ಟ್ರೇಲಿಯಕ್ಕೆ ಆರಂಭಿಕ ಆಘಾತ:

ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ ಸ್ಟೀವನ್ ಸ್ಮಿತ್ ದಾಖಲಿಸಿದ ದ್ವಿಶತಕ (211) ನೆರವಿನಲ್ಲಿ 126 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 497 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಇನಿಂಗ್ಸ್‌ನಲ್ಲಿ ಮೇಲುಗೈ ಸಾಧಿಸಿದ ಆಸ್ಟ್ರೇಲಿಯಕ್ಕೆ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ ತಿರುಗೇಟು ನೀಡುವ ಕಡೆಗೆ ಗಮನ ಹರಿಸಿದೆ.

14 ಓವರ್‌ಗಳಲ್ಲಿ 44 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಉಡಾಯಿಸುವ ಮೂಲಕ ಆಸ್ಟ್ರೇಲಿಯಕ್ಕೆ ಇಂಗ್ಲೆಂಡ್‌ನ ಜೋಫ್ರಾ ಆರ್ಚರ್ ಮತ್ತು ಸ್ಟುವರ್ಟ್ ಬ್ರಾಡ್ ಆರಂಭಿಕ ಆಘಾತ ನೀಡಿದ್ದಾರೆ.

ಡೇವಿಡ್ ವಾರ್ನರ್ (0), ಮಾರ್ಕಸ್ ಹ್ಯಾರಿಸ್(6), ಮಾರ್ಕಸ್ ಲುಬುಸ್‌ಚಾಂಗೆ (11) ಮತ್ತು ಟ್ರಾವಿಸ್ ಹೆಡ್(12) ಔಟಾಗಿದ್ದಾರೆ.

ಮಾಜಿ ನಾಯಕ ಸ್ಮಿತ್ ಮತ್ತು ಮ್ಯಾಥ್ಯೂ ವೇಡ್ ತಂಡವನ್ನು ಆಧರಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News