×
Ad

ಮೋದಿ ಸರಕಾರದಿಂದ ಹಿಂದಿ ಪತ್ರಿಕೆಗಳಲ್ಲಿ ಜಾಹೀರಾತಿಗೆ ಹೆಚ್ಚು ವೆಚ್ಚ: ಆರ್‌ಟಿಐ

Update: 2019-09-08 22:33 IST

ಹೊಸದಿಲ್ಲಿ,ಸೆ.8: ಹಿಂದಿ ಭಾಷಿಕ ರಾಜ್ಯಗಳಲ್ಲಿ ಮತ್ತಷ್ಟು ಆಳವಾಗಿ ಪಕ್ಷವನ್ನು ಬೇರೂರಿಸಬೇಕು ಎನ್ನುವ ಉದ್ದೇಶದಿಂದ ನರೇಂದ್ರ ಮೋದಿ ಸರಕಾರ ಹಿಂದಿ ದಿನಪತ್ರಿಕೆಗಳಲ್ಲಿ ಜಾಹೀರಾತಿಗೆ ಕಳೆದ ಐದು ವರ್ಷಗಳಲ್ಲಿ 890 ಕೋ.ರೂ.ಗೂ ಹೆಚ್ಚು ವೆಚ್ಚ ಮಾಡಿದೆ. ಆಂಗ್ಲ ದಿನಪತ್ರಿಕೆಗಳಲ್ಲಿ ಜಾಹೀರಾತಿಗೆ ಇದೇ ವೇಳೆ 719 ಕೋ.ರೂ. ವ್ಯಯಿಸಲಾಗಿದೆ ಎಂಬ ಮಾಹಿತಿ ಐಎಎನ್‌ಎಸ್‌ಗೆ ಮಾಹಿತಿ ಹಕ್ಕಿನಡಿ ದೊರೆತಿದೆ.

ಡಿಜಿಟಲ್ ಜಾಹೀರಾತುಗಳಲ್ಲಿ ಜಾಗತಿಕವಾಗಿ ಶೇ.68 ಪಾಲು ಹೊಂದಿರುವ ಪೇಸ್‌ಬುಕ್ ಮತ್ತು ಗೂಗಲ್ ಮುಂತಾದ ಡಿಜಿಟಲ್ ವೇದಿಕೆಗಳಿಂದ ಕಠಿಣ ಸ್ಪರ್ಧೆ ಎದುರಾಗಿರುವುದರಿಂದ ಸದ್ಯ ಸಂಕಷ್ಟಕ್ಕೆ ಸಿಲುಕಿರುವ ಮುದ್ರಣ ಮಾಧ್ಯಮಕ್ಕೆ ಹೋಲಿಸಿದರೆ ಹಿಂದಿ ಹಾಗೂ ಇತರ ಪ್ರಾದೇಶಿಕ ದಿನಪತ್ರಿಕೆಗಳು ದೇಶದಲ್ಲಿ ಸಮೃದ್ಧಿ ಹೊಂದುತ್ತಿವೆ. 2014-15ರಿಂದ 2018-19ರ ಅವಧಿಯಲ್ಲಿ ನೂರು ಕೋ.ರೂ. ಮೊತ್ತದ ಜಾಹೀರಾತು ಪಡೆದಿರುವ ‘ದೈನಿಕ್ ಜಾಗರಣ್’ ಪತ್ರಿಕೆ ಈ ಸಾಲಿನಲ್ಲಿ ಮೊದಲ ಜಾಗದಲ್ಲಿ ನಿಲ್ಲುತ್ತದೆ. ‘ದೈನಿಕ್ ಭಾಸ್ಕರ್’ ಈ ಸಮಯದಲ್ಲಿ 56 ಕೋ.92 ಲಕ್ಷ ರೂ. ಪಡೆದರೆ ‘ಹಿಂದುಸ್ಥಾನ್’ ಅಂದಾಜು 50 ಕೋ.66 ಲಕ್ಷ ರೂ. ಮೊತ್ತದ ಸರಕಾರಿ ಜಾಹೀರಾತು ಪಡೆದುಕೊಂಡಿದೆ ಎಂದು ಆರ್‌ಟಿಐ ಬಯಲು ಮಾಡಿದೆ.

‘ಪಂಜಾಬ್ ಕೇಸರಿಗೆ’ 50 ಕೋ. 66 ಲಕ್ಷ ರೂ. ಮತ್ತು ‘ಅಮರ್ ಉಜಾಲ’ ಪತ್ರಿಕೆಗೆ 47.4 ಕೋ.ರೂ, ನವಭಾರತ್ ಟೈಮ್ಸ್‌ಗೆ 30ಕೋ. 76 ಲಕ್ಷ ರೂ. ಮತು ‘ರಾಜಸ್ಥಾನ್ ಪತ್ರಿಕಾಗೆ’ 27 ಕೋ. 78 ಲಕ್ಷ ರೂ. ಸರಕಾರಿ ಜಾಹೀರಾತು ದೊರಕಿದೆ. ಓದುಗರ ವಿಷಯದಲ್ಲೂ ಆಂಗ್ಲ ಪತ್ರಿಕೆಗಳು ಹಿನ್ನಡೆ ಅನುಭವಿಸಿದೆ. 2009-2018ರ ಅವಧಿಯಲ್ಲಿ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ಪತ್ರಿಕೆಗಳು ವಾರ್ಷಿಕ ಶೇ.6 ಮತ್ತು ಶೇ.7ರ ದರದಲ್ಲಿ ಚಂದದಾರರನ್ನು ಹೆಚ್ಚಿಸುತ್ತಾ ಬರುತ್ತಿದ್ದರೆ ಆಂಗ್ಲ ಪತ್ರಿಕೆ ಕೇವಲ ಶೇ.2 ದರದಲ್ಲಿ ಓದುಗ ಬಳಗವನ್ನು ಹೆಚ್ಚಿಸಲು ಸಫಲವಾಗಿದೆ ಎಂದು ಆರ್‌ಟಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News