ಮಂಜೇಶ್ವರ : ವಿದ್ಯುತ್ ಆಘಾತ; ಬೆಂಕಿಗಾಹುತಿಯಾದ ಬೇಕರಿ

Update: 2019-09-09 05:53 GMT

ಮಂಜೇಶ್ವರ : ಮಂಜೇಶ್ವರ ಒಳಗಿನ ಪೇಟೆಯಲ್ಲಿ ಬೇಕರಿಯೊಂದು ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾದ ಬೆಂಕಿಯಿಂದಾಗಿ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ತಡ ರಾತ್ರಿ ನಡೆದಿದೆ.

ಸೋಮವಾರ ಬೆಳಗ್ಗೆ ಪತ್ರಿಕೆ ಹಾಕುತ್ತಿದ್ದ ವ್ಯಕ್ತಿ ಅಂಗಡಿಯೊಳಗಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಮೀದ್ ಮಾಲಕತ್ವದ ಅಲ್ಫಾ ಬೇಕರಿಯ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಸಾಮಗ್ರಿಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಉಪ್ಪಳದಿಂದ ತಲುಪಿದ ಅಗ್ನಿ ಶಾಮಕ ದಳ ಹಾಗೂ ಮಂಜೇಶ್ವರ ಪೊಲೀಸರು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News