ಹೆಬ್ರಿ: ಚಿತ್ರಕಲಾ ಸ್ಪರ್ಧೆಯ ಫಲಿತಾಂಶ

Update: 2019-09-09 15:08 GMT

ಹೆಬ್ರಿ, ಸೆ.9: ಹೆಬ್ರಿ ಸೂಪರ್ ಮಾರ್ಕೆಟ್ ಆಶ್ರಯದಲ್ಲಿ ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ನೇತೃತ್ವದಲ್ಲಿ ಸ್ವಾತಂತ್ರ ದಿನಾಚರಣೆ ಅಂಗವಾಗಿ ಹೆಬ್ರಿ ದುರ್ಗಾ ಆರ್ಕೇಡ್‌ನ ಶಾರದಾ ನಂದಪ್ಪ ಶೆಟ್ಟಿ ಸಭಾಭವನದಲ್ಲಿ ಏರ್ಪಡಿಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರ ಫಲಿತಾಂಶ ಈ ಕೆಳಗಿನಂತಿದೆ.

ಜೂನಿಯರ್ ವಿಭಾಗ: ಪ್ರಥಮ -ತೃಪ್ತಿ ಹಿರಿಯಡಕ(ಮಾಧವ ಕೃಪ ಶಾಲೆ ಮಣಿಪಾಲ್), ದ್ವಿತೀಯ -ವಿನೀಶ್ ಹೆಬ್ರಿ(ಎಸ್.ಆರ್. ಹೆಬ್ರಿ), ತೃತೀಯ- ರೀಶಾ ಹೆಬ್ರಿ(ಎಸ್.ಆರ್.ಹೆಬ್ರಿ), ಸಮಾಧಾನಕರ -ಹೆಬ್ರಿ ಎಸ್.ಆರ್.ಶಾಲೆಯ ವಿದ್ಯಾರ್ಥಿಗಳಾದ ಮಾನ್ಯ, ಪ್ರೀಶಾ, ಮಾನಿಕ್ಷ್.

ಸೀನಿಯರ್ ವಿಭಾಗ: ಪ್ರ- ಅನನ್ಯ(ಅಮೃತ ಭಾರತಿ ಹೆಬ್ರಿ) ,ದ್ವಿ- ಪ್ರನವಂತ್ ಬಿ.(ಅಮೃತಭಾರತಿ ಹೆಬ್ರಿ), ತೃ-ಶ್ರೀವತ್ಸ(ಎಸ್.ಆರ್.ಹೆಬ್ರಿ), ಸಮಾಧಾನಕರ- ನೈದಿಲ್(ಅಮೃತ ಭಾರತಿ ಹೆಬ್ರಿ), ಎಸ್.ಆರ್.ಶಾಲೆಯ ಚರಣ್, ಸುಶ್ಯಾಮ್ ಪ್ರಭು.

ವಿಜೇತರಿಗೆ ಬಹುಮಾನದೊಂದಿಗೆ ಪ್ರಮಾಣ ಪತ್ರ ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News