ಮಂಗಳೂರು ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್: ಗೋಲ್ಡನ್ ರಾಕೆಟ್ ತಂಡ ಚಾಂಪಿಯನ್

Update: 2019-09-10 05:26 GMT

ಮಂಗಳೂರು, ಸೆ.9: ಬ್ಯಾರೀಸ್ ಸ್ಪೋಟ್ಸ್ ಪ್ರಮೋಟರ್ಸ್ ಆಯೋಜಿಸಿದ್ದ 'ಮಂಗಳೂರು ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್-2' (ಎಂಬಿಪಿಎಲ್-2) ನಲ್ಲಿ ಸಿ.ಪಿ.ಕಯ್ಯೂಮ್ ಅವರ ಗೋಲ್ಡನ್ ರಾಕೆಟ್ ತಂಡ ಚಾಂಪಿಯನ್ ಪಟ್ಟವನ್ನು ಗಳಿಸಿದೆ.

ನಗರದ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸದಾನಂದ ಶೆಟ್ಟಿ ಈ ಕ್ರೀಡಾಕೂಟವನ್ನು ಉದ್ಘಾಟಿಸಿದರು.

ನಗರದ ಪ್ರಸಿದ್ಧ ಆರ್ಕಿಟೆಕ್ಟ್, ಇಂಡಿಯನ್ ಡಿಸೈನ್ ಸ್ಕೂಲ್ ಅಧ್ಯಕ್ಷ ಮುಹಮ್ಮದ್ ನಿಸಾರ್ ಹಾಗೂ ಮಂಗಳ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಸಿ.ಎಸ್.ಭಂಡಾರಿ ಮಾತನಾಡಿ ಶುಭ ಹಾರೈಸಿದರು.

ಹಾಜಿ ಎಸ್.ಎಂ.ರಶೀದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಮಂಗಳೂರು ಪರ್ಸಿನ್ ಬೋಟ್ ಸಂಘದ ಅಧ್ಯಕ್ಷ ಮೋಹನ್ ಬೆಂಗರೆ, ದ.ಕ. ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ಅಧ್ಯಕ್ಷ ಡಿ.ಎಂ.ಅಸ್ಲಂ ಹಾಗೂ ಯಾಸಿರ್ ವೆಸ್ಟ್ ಲೈನ್ ಉಪಸ್ಥಿತರಿದ್ದರು.

ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸ್ಪರ್ಧೆಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಸಿ.ಪಿ.ಕಯ್ಯೂಮ್ ಮಾಲಕತ್ವದ ಗೋಲ್ಡನ್ ರಾಕೆಟ್ ತಂಡ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸಿ ‘ಎಂಬಿಪಿಎಲ್-2’ ಚಾಂಪಿಯನ್ ಆಗಿ ಹೊರಹೊಮ್ಮಿತು. ತಂಡದಲ್ಲಿ ರಯೀಸ್ ಪಿ.ಸಿ., ಸುಹಾಗ್, ಅನಂತೇಶ್, ಸಚಿನ್, ಮಾಧವ ನಾಯಕ್ ಇದ್ದರು.

ಸುಮಿತ್ ನಾಯಕ್, ಗುರು ಗಡಿಯಾರ್, ಅಬ್ದುಲ್ ಮೊಮಿನ್ 35 ವರ್ಷ ಮೇಲ್ಪಟ್ಟವರ ಕ್ರೀಡಾಕೂಟದ ವಿಭಾಗದಲ್ಲಿ ಪಾಲ್ಗೊಂಡಿದ್ದರು. ಪ್ರಕಾಶ್ ದೇವದಾಸ್, ಪ್ರಾಣ್ ಹೆಗಡೆ 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿದ್ದರು. ಟ್ರಿವಿಯ, ಜ್ಯೋತಿ ನಾಯಕ್, ನಸೀಮಾ ಮಹಿಳೆಯರ ವಿಭಾಗದ ವಿಜಯಿ ತಂಡದಲ್ಲಿದ್ದರು.

ಡಾ.ಸತೀಶ್ಚಂದ್ರ ಮಾಲಕತ್ವದ ಫ್ಲಾಂಟ್ ಫೈಟರ್ಸ್ ದ್ವಿತೀಯ ಸ್ಥಾನ ಗಳಿಸಿದೆ. ತಂಡದಲ್ಲಿ ವಿಮಲೇಶ್, ಅನಿರುದ್ಧ್ ಶೆಣೈ, ವರುಣ್ ಗೌಡ, ಸುಶಾಂತ್, ವಿನಯ್ ಪುರುಷರ ತಂಡದಲ್ಲಿದ್ದರು.

35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಹೇಶ್ ಪ್ರಭು, ಗುರು ವಿಕ್ರಂ ಪ್ರಸಾದ್, ಸಂತೋಷ್ ಆಚಾರ್ಯ ಇದ್ದರು. 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸಂಜಯ್ ಆರ್.ಎಂ., ಡಾ.ಸತೀಶ್ಚಂದ್ರ, ಪ್ರಕಾಶ್ ರಾವ್ ಇದ್ದರು. ಮಹಿಳೆಯರ ವಿಭಾಗದಲ್ಲಿ ನೀತಾ ಹೆಗಡೆ, ಸುಜಯಾ ಶೆಟ್ಟಿ, ರಾಜೇಶ್ವರಿ ಆಚಾರ್ಯ ಅವರು ಪಾಲ್ಗೊಂಡಿದ್ದರು.

ಕೆ.ಎಲ್.ಪಿ. ಯೂಸುಫ್ ವಿಜೇತ ತಂಡಗಳಿಗೆ ಚಾಂಪಿಯನ್ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಿದರು. ರೊನಾಲ್ಡ್ ಗೋಮ್ಸ್, ಅಶೋಕ್ ಕುಮಾರ್ ಹೆಗಡೆ, ಡಾ.ರಾಜೇಶ್, ಇಸ್ಮಾಯೀಲ್ ಕೆ.ಪಿ., ಬ್ಯಾರೀಸ್ ಸ್ಪೋಟ್ಸ್ ಪ್ರಮೋಟರ್ಸ್ ಅಧ್ಯಕ್ಷ ನೂರ್ ಮುಹಮ್ಮದ್ ವಿಜಯಿ ತಂಡಗಳ ಸದಸ್ಯರಿಗೆ ಬಹುಮಾನ ವಿತರಿಸಿದರು.

ಬ್ಯಾರೀಸ್ ಸ್ಪೋಟ್ಸ್ ಪ್ರಮೋಟರ್ಸ್ ಕಾರ್ಯದರ್ಶಿ ಶಹನವಾಝ್ ಸ್ವಾಗತಿಸಿದರು. ಸದಸ್ಯ ಆರ್ಕಿಟೆಕ್ಟ್ ಫಝ್ಲಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News