ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವ್ಯಾಪ್ತಿಯ 3 ಸೆಕ್ಟರ್ ಗಳಲ್ಲಿ ರಕ್ತದಾನ ಶಿಬಿರ

Update: 2019-09-10 09:04 GMT

ಸುರತ್ಕಲ್, ಸೆ.10: ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ 112, 113, 114ನೇ ರಕ್ತದಾನ ಶಿಬಿರವು ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವ್ಯಾಪ್ತಿಯ ಸುರತ್ಕಲ್, ಕಾಟಿಪಳ್ಳ, ಮುಲ್ಕಿ ಸೆಕ್ಟರ್ ಗಳಲ್ಲಿ ನಡೆಯಿತು.

112ನೇ ರಕ್ತದಾನ ಶಿಬಿರವು ಸುರತ್ಕಲ್ ಸೆಕ್ಟರ್ ಮತ್ತು ಮುಕ್ಕ ಶಾಖೆಯ ವತಿಯಿಂದ ಮುಕ್ಕ ಅಂಜುಮಾನ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದ್ದು, 61 ಯೂನಿಟ್ ರಕ್ತ ಸಂಗ್ರಹವಾಗಿದೆ.

113ನೇ ರಕ್ತದಾನ ಶಿಬಿರವು ಕಾಟಿಪಳ್ಳ ಸೆಕ್ಟರ್ ವತಿಯಿಂದ ಕಾಟಿಪಳ್ಳದ ಜಾಸ್ಮೀನ್ ಮಹಲ್ ನಲ್ಲಿ ನಡೆಸಿ 87 ಯೂನಿಟ್ ರಕ್ತ ಸಂಗ್ರಹವಾಗಿದೆ.

114ನೇ ರಕ್ತದಾನ ಶಿಬಿರವನ್ನು ಮುಲ್ಕಿ ಸೆಕ್ಟರ್ ವತಿಯಿಂದ ಕಿನ್ನಿಗೋಳಿಯ ಯುಗ ಪುರುಷ ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಇಲ್ಲಿ 42 ಯೂನಿಟ್ ರಕ್ತ ಸಂಗ್ರಹವಾಗಿದೆ.

ಮೂರು ಕೇಂದ್ರಗಳಲ್ಲಿ ನಡೆದ ರಕ್ತದಾನ ಶಿಬಿರಗಳಲ್ಲಿ ದೇರಳಕಟ್ಟೆಯ ಯೆನೆಪೊಯ ಮೆಡಿಕಲ್ ಕಾಲೇಜು ಹಾಗೂ ಮಂಗಳೂರು ವೆನ್ಲಾಕ್ ಆಸ್ಪತ್ರೆಯವರು ಸಹಕಾರ ನೀಡಿದರು.

ಈ ಶಿಬಿರಗಳಲ್ಲಿ  ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ನಾಯಕರು, ದಕ್ಷಿಣ ಕನ್ನಡ ವೆಸ್ಟ್ ಝೋನ್ ನಾಯಕರು, ಸುರತ್ಕಲ್ ಡಿವಿಷನ್ ನಾಯಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News