ಗೋಳ್ತಮಜಲು - ಮಂಚಿ ರಸ್ತೆ ದುರಸ್ಥಿಗಾಗಿ ರಿಕ್ಷಾ ಚಾಲಕರಿಂದ ಶಾಸಕರಿಗೆ ಮನವಿ

Update: 2019-09-10 16:53 GMT

ವಿಟ್ಲ : ಬಂಟ್ವಾಳ ತಾಲೂಕು ಗೋಳ್ತಮಜಲು ನಿಂದ ಬೋಳಂತೂರು, ಮಂಚಿ ರಸ್ತೆಯ ಮರು ಡಾಮರೀಕರಣ ಹಾಗೂ ಚರಂಡಿ ವ್ಯವಸ್ಥೆ ಗೊಳಿಸುವಂತೆ ಬೋಳಂತೂರು ರಿಕ್ಷಾ ಚಾಲಕ - ಮಾಲಕ ಸಂಘದವರು ಬಂಟ್ವಾಳ ಶಾಸಕ ರಾಜೇಶ್ ನೈಾಯ್ಕ್ ಅವರಿಗೆ ಮನವಿ ಸಲ್ಲಿಸಿದರು.

ಈ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರ ಹಾಗೂ ನಡೆದಾಡಲು ಕೂಡಾ ಕಷ್ಟಕರವಾಗಿದೆ, ಇಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದಾಡುತ್ತಿದ್ದು  ವಾಹನ ಸಂಚರಿಸುವಾಗ ಶಾಲಾ ಮಕ್ಕಳ ಮೇಲೆ ಕೆಸರು ನೀರಿನ ಸಿಂಚನವಾಗುತ್ತಿದೆ,  ಆದುದರಿಂದ ಈ ಭಾಗದ ರಸ್ತೆಯ ಮರು ಡಾಮರೀಕರಣ ಹಾಗೂ ಚರಂಡಿ ನಿರ್ಮಿಸುವ ಮೂಲಕ ಜನತೆಯ ಸಂಕಷ್ಟವನ್ನು ನಿವಾರಿಸುವಂತೆ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭ ರಿಕ್ಷಾ ಚಾಲಕ - ಮಾಲಕ ಸಂಘದ ಅದ್ಯಕ್ಷ ಎಸ್.ಎಚ್.ಅಬೂಬಕ್ಕರ್, ಕಾರ್ಯದರ್ಶಿ ಹಸೈನಾರ್, ಪ್ರಮುಖರಾದ ದುನಿಯಾ ಅದ್ರಾಮ ಬೋಳಂತೂರು, ಉದಯ ಕುಮಾರ್, ಬಿ.ಕೆ.ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News