ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಉಳ್ಳಾಲ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

Update: 2019-09-11 16:47 GMT

ಉಳ್ಳಾಲ: ಉಳ್ಳಾಲ ನಗರಸಭೆ ವಿರುದ್ಧ ಹಾಗು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಳ್ಳಾಲ ಹಿತರಕ್ಷಣಾ ಸಮಿತಿ ವತಿಯಿಂದ ಉಳ್ಳಾಲ ನಗರ ಸಭೆ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ದಿನಕರ ಉಳ್ಳಾಲ, ಸಿಪಿಐಎಂ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಯಶವಂತ್ ಅಮೀನ್, ಚಂದ್ರಹಾಸ್ ಪಂಡಿತ್ ಹೌಸ್, ಭಗವಾನ್ ದಾಸ್, ಮುಸ್ತಫಾ ಎವರೆಸ್ಟ್ ಮಾತನಾಡಿ, ನಗರಸಭೆ ಬೇಜವಾಬ್ದಾರಿ, ಭ್ರಷ್ಟಾಚಾರ ನಡೆಸುತ್ತಿದ್ದೆ ಎಂದು ಆರೋಪಿಸಿದರು ಹಾಗು ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಸ್ತಫಾ, ಹಮೀದ್ ಉಳ್ಳಾಲ, ಕೌನ್ಸಿಲರ್ ಗಳಾದ ಬಶೀರ್, ಜಬ್ಬಾರ್, ಮುಸ್ತಾಕ್ ಪಟ್ಲ, ನಮಿತಾ ಕಟ್ಟಿ, ಮಮತಾ ರಾಜೇಶ್ ,ರೇಶ್ಮಾ, ಖಲೀಲ್, ನಗರ ಸಭೆ ಮಾಜಿ ಉಪಾಧ್ಯಕ್ಷೆ ಭವಾನಿ, ಮೊಗವೀರ ಸಂಘದ ಮುಖಂಡ ಸದಾನಂದ ಬಂಗೇರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನಿಲ್ ದಾಸ್, ಉಳ್ಳಾಲ ಘಟಕ ಅಧ್ಯಕ್ಷ ಡಿ.ಎಂ. ಫೈರೋಝ್, ಪ್ರ.ಕಾರ್ಯದರ್ಶಿ ಇಫ್ತಿಕಾರ್ ಉಳ್ಳಾಲ ಮೊದಲಾದವರು ಉಪಸ್ಥಿತರಿದ್ದರು.

ಅಶ್ರಫ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News