ಬಜ್ಪೆ: ಎಂಸಿಸಿ ಬ್ಯಾಂಕಿನ ಎಟಿಎಂ ಸೌಲಭ್ಯದ ಉದ್ಘಾಟನೆ

Update: 2019-09-11 10:19 GMT

ಮಂಗಳೂರು: ಬಜ್ಪೆ ಶಾಖೆಯ ಎಂಸಿಸಿ ಬ್ಯಾಂಕಿನ ಎಟಿಎಂ ಸೌಲಭ್ಯವನ್ನು ಇಂದು ಬೆಳಗ್ಗೆ ಉದ್ಘಾಟಿಸಲಾಯಿತು. ಬಜ್ಪೆ ಸೈಂಟ್ ಜೋಸೆಫ್ಸ್ ಚರ್ಚಿನ ಧರ್ಮಗುರುಗಳಾದ ರೆ| ರೊನಾಲ್ಡ್ ಕುಟಿನ್ಹೊ, ಎಟಿಎಂ ಸೌಲಭ್ಯವನ್ನು ಉದ್ಘಾಟಿಸಿ ಆಶೀರ್ವದಿಸಿದರು.

ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಬಜ್ಪೆ ಸೈಂಟ್ ಜೋಸೆಫ್ಸ್ ಚರ್ಚಿನ ಧರ್ಮಗುರುಗಳಾದ ರೆ| ರೊನಾಲ್ಡ್ ಕುಟಿನ್ಹೊ ಮತ್ತು ವಕೀಲ ಚಂದ್ರಶೇಖರ್ ಅಮೀನ್ ಮುಖ್ಯ ಅತಿಥಿಗಳಾಗಿದ್ದರು.

ಶಾಖಾ ಉಸ್ತುವಾರಿ ನಿರ್ದೇಶಕರಾದ ಡೇವಿಡ್ ಡಿಸೋಜಾ, ಗಣ್ಯರನ್ನು ಮತ್ತು ಬ್ಯಾಂಕಿನ ಗ್ರಾಹಕರನ್ನು ಸ್ವಾಗತಿಸಿ, ಬ್ಯಾಂಕ್ ನೀಡುವ ಎಲ್ಲಾ ಸೇವೆಗಳನ್ನು ಬಳಸಲು ಗ್ರಾಹಕರನ್ನು ಕರೆ ನೀಡಿದರು.

ಬಜ್ಪೆ ಸೈಂಟ್ ಜೋಸೆಫ್ಸ್ ಚರ್ಚಿನ ಧರ್ಮಗುರುಗಳಾದ ರೆ| ರೊನಾಲ್ಡ್ ಕುಟಿನ್ಹೊ, ಬ್ಯಾಂಕಿನ ಕಳೆದ 10 ವರ್ಷಗಳ ಗಮನಾರ್ಹ ಪ್ರಗತಿಗಾಗಿ ಅಭಿನಂದಿಸಿ, ಕಠಿಣ ಪರಿಶ್ರಮ, ನಿರಂತರತೆ ಮತ್ತು ಗ್ರಾಹಕ ಸ್ನೇಹಿ ಸೇವೆಯು ಯಾವಾಗಲೂ ಬ್ಯಾಂಕ್‍ಗೆ ಸಮೃದ್ಧ ಲಾಭಾಂಶವನ್ನು ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಕೀಲ ಚಂದ್ರಶೇಖರ್ ಅಮೀನ್, ಬಜ್ಪೆ ಪ್ರದೇಶದಲ್ಲಿ ಎಟಿಎಂ ಅನುಷ್ಠಾನಕ್ಕಾಗಿ ಶ್ಲಾಘಿಸಿದರು. ಬ್ಯಾಂಕಿನ ಅಧ್ಯಕ್ಷರಾದ  ಅನಿಲ್ ಲೋಬೊ, ಗ್ರಾಹಕರಿಗೆ ಬ್ಯಾಂಕಿನ ಎಲ್ಲಾ ಸೇವೆಗಳನ್ನು ಬಳಸುವಂತೆ ಮತ್ತು ಬ್ಯಾಂಕಿನ ಪ್ರಗತಿಗೆ ಕೊಡುಗೆ ನೀಡುವಂತೆ ಕರೆ ನೀಡಿದರು. ಎಂ.ಸಿ.ಸಿ ಬ್ಯಾಂಕ್ ಲಾಭ ಆಧಾರಿತವಲ್ಲ, ಇದು ಸೇವಾ ಆಧಾರಿತ ಬ್ಯಾಂಕ್. ಆದ್ದರಿಂದ ಗ್ರಾಹಕರಿಗೆ ಯಾವುದೇ ಶುಲ್ಕ / ಹೊರೆಯಿಲ್ಲದೆ ಗುಣಮಟ್ಟದ ಸೇವೆಯನ್ನು ನೀಡಲು ಬದ್ಧವಾಗಿದೆ ಎಂದು ಹೇಳಿದರು.

ಹಂಪನ್‍ಕಟ್ಟಾ ಶಾಖೆಯ ನಿಬಂಧಕರಾದ  ಡೆರಿಲ್ ಲಸ್ರಾದೊ ಕಾರ್ಯಕ್ರಮವನ್ನು ಸಂಯೋಜಿಸಿದರು ಮತ್ತು ಬಜ್ಪೆ ಶಾಖೆಯ ವ್ಯವಸ್ಥಾಪಕಿ  ಹೆಝೆಲ್ ಸಲ್ಡಾನ್ಹಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News