ಜಾಮೀನು ಕೋರಿ ದಿಲ್ಲಿ ಹೈಕೋರ್ಟ್‌ಗೆ ಚಿದಂಬರಂ ಅರ್ಜಿ

Update: 2019-09-11 16:27 GMT

ಹೊಸದಿಲ್ಲಿ, ಸೆ.11: ಐಎನ್‌ಎಕ್ಸ್ ಮೀಡಿಯ ಪ್ರಕರಣದಲ್ಲಿ ತನಗೆ 14 ದಿನ ನ್ಯಾಯಾಂಗ ಕಸ್ಟಡಿ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮತ್ತು ಪ್ರಕರಣದಲ್ಲಿ ಜಾಮೀನು ಕೋರಿ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ನ್ಯಾಯಾಲಯ ಸೆ.5ರಂದು ಚಿದಂಬರಂಗೆ 14 ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿತ್ತು. ಚಿದಂಬರಂಗೆ ಝಡ್ ಶ್ರೇಣಿಯ ಭದ್ರತೆ ಇರುವುದರಿಂದ ಅವರನ್ನು ಪ್ರತ್ಯೇಕ ಕೋಣೆಯಲ್ಲಿರಿಸಬೇಕು ಮತ್ತು ಔಷಧಿಯನ್ನು ಕೊಂಡೊಯ್ಯಲು ಅವಕಾಶ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿತ್ತು. ಈ ಮಧ್ಯೆ, ಟ್ವೀಟ್ ಮಾಡಿರುವ ಚಿದಂಬರಂ, ದೇಶದ ಅರ್ಥವ್ಯವಸ್ಥೆಯ ಬಗ್ಗೆ ಕಳವಳಗೊಂಡಿರುವುದಾಗಿ ಹೇಳಿದ್ದಾರೆ.

ಬಡವರಿಗೆ ಗರಿಷ್ಟ ತೊಂದರೆಯಾಗಿದೆ. ಕಡಿಮೆ ಆದಾಯ, ಉದ್ಯೋಗಾವಕಾಶ ಕುಸಿತ, ವ್ಯಾಪಾರ ಕಡಿಮೆಯಾಗಿರುವುದು, ಹೂಡಿಕೆ ಕುಸಿತದಿಂದ ಬಡವರು ಮತ್ತು ಮಧ್ಯಮವರ್ಗದವರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಅಂಧಕಾರದಿಂದ ದೇಶವನ್ನು ಹೊರತರಲು ಕೇಂದ್ರ ಸರಕಾರದ ಬಳಿ ಯಾವುದಾದರೂ ಯೋಜನೆಯಿದೆಯೇ ಎಂದು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News