ಮಮತಾ ಬ್ಯಾನರ್ಜಿ ತಲೆ ಬುರುಡೆ ಒಡೆದವನ ಖುಲಾಸೆ !

Update: 2019-09-12 15:10 GMT

ಕೋಲ್ಕತ್ತಾ , ಸೆ. 12 : 29 ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ ಅವರ ಕೊಲೆಯತ್ನ ಮಾಡಿದ್ದ ಲಾಲು ಆಲಂ ಎಂಬಾತ ಇದೀಗ ದೋಷಮುಕ್ತನಾಗಿದ್ದಾನೆ.ಆಗಸ್ಟ್ 16, 1990 ರಲ್ಲಿ ಆಗ ಯುವ ಕಾಂಗ್ರೆಸ್ ಪಶ್ಚಿಮ ಬಂಗಾಳ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಮಮತಾ ಬ್ಯಾನರ್ಜಿ ಮೇಲೆ ಅವರ ನಿವಾಸದ ಸಮೀಪ ದಾಳಿ ನಡೆದಿತ್ತು. ಆ ದಾಳಿಯಲ್ಲಿ ಲಾಲು ಆಲಂ ಮಮತಾ ತಲೆಗೆ ಕೋಲೊಂದರಲ್ಲಿ ಹೊಡೆದಿದ್ದ. ಪೆಟ್ಟಿನ ತೀವ್ರತೆಗೆ ಮಮತಾ ತಲೆ ಬುರುಡೆ ಒಡೆದಿತ್ತು. 

ಮಮತಾ ಬ್ಯಾನರ್ಜಿ ಅವರೇ ಮುಖ್ಯಮಂತ್ರಿಯಾದ ಮೇಲೆ ಏನಾಗಬಹುದು ಎಂದು ಹೆದರಿದ್ದೆ. ಆದರೆ ಸರಕಾರ ಪ್ರಕರಣವನ್ನು ಮುಂದುವರಿಸಲು ಬಯಸದೆ ಇದ್ದುದರಿಂದ ನಾನು ಈಗ ನಿರಾಳನಾಗಿದ್ದೇನೆ. ಮಮತಾ ಮುಖ್ಯಮಂತ್ರಿಯಾದ 2011 ರಲ್ಲೆ ಈ ನಿರ್ಧಾರ ತೆಗೆದುಕೊಂಡಿದ್ದರೆ ನನಗೆ ಇನ್ನಷ್ಟು ಅನುಕೂಲವಾಗುತ್ತಿತ್ತು ಎಂದು ಆಲಂ ಹೇಳಿದ್ದಾರೆ.  

ಆಲಂ ಸಿಪಿಎಂ ಪಕ್ಷದ ಯುವ ಘಟಕದ ಮಾಜಿ ನಾಯಕ. 2011 ರಲ್ಲಿ ಮಮತಾ ಸಿಎಂ ಆದಾಗ ಆಲಂ ತನ್ನ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದರು. ತಾನು ಆ ಹಲ್ಲೆಯಾದ ದಿನ ಮಾತ್ರ ನನ್ನ ಜೀವನದಲ್ಲಿ ತಾಯಿಯ ಬಳಿ ಎಲ್ಲಿಗೆ ಹೋಗುತ್ತೇನೆ ಎಂದು ಹೇಳದೆ ಮನೆಯಿಂದ ಹೋಗಿದ್ದೆ ಎಂದು ಮಮತಾ ಸಂದರ್ಶನವೊಂದರಲ್ಲಿ ಹೇಳಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News