ಜೋರಾಗಿ ನಕ್ಕ ಮಹಿಳೆ: ತೆರೆದ ಬಾಯಿ ಮುಚ್ಚಲಾಗಲೇ ಇಲ್ಲ!

Update: 2019-09-12 15:44 GMT

   ಬೀಜಿಂಗ್, ಸೆ. 12: ನಗುವುದು ಒಳ್ಳೆಯದು, ಹೆಚ್ಚು ನಕ್ಕಷ್ಟೂ ಒಳ್ಳೆಯದು! ಎಲ್ಲಾ ಸರಿ. ಆದರೆ, ಚೀನಾದ ಮಹಿಳೆಯೊಬ್ಬರು ಜೋರಾಗಿ ನಗಲು ಹೋಗಿ ಅವರ ಬಾಯಿ ತೆರೆದ ಸ್ಥಿತಿಯಲ್ಲೇ ಸ್ಥಗಿತಗೊಂಡು ಸಂಕಷ್ಟ ಅನುಭವಿಸಿದ ಘಟನೆಯೊಂದು ವರದಿಯಾಗಿದೆ.

ಕಳೆದ ರವಿವಾರ ಗುವಾಂಗ್‌ಝೂ ಪ್ರಾಂತದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತನ ಸಂಗಡಿಗರೊಂದಿಗೆ ಸೇರಿ ಜೋರಾಗಿ ನಕ್ಕರು. ಆಗ ಅವರ ದವಡೆ ಮೂಳೆಯ ಸ್ಥಾನ ತಪ್ಪಿತು (ಡಿಸ್‌ಲೊಕೇಶನ್).

ಅದೃಷ್ಟವಶಾತ್ ಅದೇ ರೈಲಿನಲ್ಲಿ ವೈದ್ಯರೊಬ್ಬರಿದ್ದರು.

‘‘ಅವರ ಬಾಯಿಯಿಂದ ಜೊಲ್ಲು ಸುರಿಯುತ್ತಿತ್ತು. ಅವರಿಗೆ ಪಕ್ಷವಾತ ಆಗಿರಬೇಕೆಂದು ಮೊದಲು ನಾನು ಊಹಿಸಿದೆ. ಆದರೆ, ಅವರ ರಕ್ತದ ಒತ್ತಡ ಸರಿಯಿತ್ತು. ಬಳಿಕ ಕೆಲವು ಪ್ರಶ್ನೆಗಳನ್ನು ಕೇಳಿದಾಗ, ಅವರ ದವಡೆ ಮೂಳೆ ಸ್ಥಳಾಂತರಗೊಂಡಿರುವುದು ಗೊತ್ತಾಯಿತು’’ ಎಂದು ವೈದ್ಯ ಲುವೊ ವೆನ್ಸ್‌ಹೆಂಗ್ ಹೇಳಿದರು.

ಎರಡನೇ ಪ್ರಯತ್ನದಲ್ಲಿ ದವಡೆಯನ್ನು ಸ್ವಸ್ಥಾನಕ್ಕೆ ತರುವಲ್ಲಿ ವೈದ್ಯ ಯಶಸ್ವಿಯಾದರು.

ಈ ಹಿಂದೆ ಒಮ್ಮೆ ವಾಂತಿ ಮಾಡುತ್ತಿದ್ದಾಗಲೂ ಆ ಮಹಿಳೆಯ ದವಡೆ ಮೂಳೆಯ ಸ್ಥಳಾಂತರವಾಗಿತ್ತಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News