ಕೆಲಸದಾಳಿಗೆ ಹೊಡೆದ ಪ್ರಕರಣ: ಸೌದಿ ರಾಜಕುಮಾರಿಗೆ 10 ತಿಂಗಳು ಜೈಲು

Update: 2019-09-12 15:54 GMT

ಪ್ಯಾರಿಸ್, ಸೆ. 12: 2016ರಲ್ಲಿ ಪ್ಯಾರಿಸ್ನ ಮನೆಯಲ್ಲಿ ಕೆಲಸಗಾರನೊಬ್ಬನಿಗೆ ಹೊಡೆದ ಪ್ರಕರಣದಲ್ಲಿ, ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಸಹೋದರಿಯೊಬ್ಬರಿಗೆ ಫ್ರಾನ್ಸ್‌ನ ನ್ಯಾಯಾಲಯವೊಂದು ಗುರುವಾರ 10 ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಆದರೆ, ಶಿಕ್ಷೆಯ ಜಾರಿಯನ್ನು ನ್ಯಾಯಾಲಯವು ಅಮಾನತಿನಲ್ಲಿಟ್ಟಿದೆ.

ಪ್ಲಂಬರ್‌ಗೆ ಹೊಡೆಯುವಂತೆ ತನ್ನ ಅಂಗರಕ್ಷಕನಿಗೆ ಆದೇಶ ನೀಡಿದ ಆರೋಪವನ್ನು ಸೌದಿ ಅರೇಬಿಯದ ದೊರೆ ಸಲ್ಮಾನ್‌ರ ಪುತ್ರಿ ಹಾಗೂ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ಸಹೋದರಿ ಹಸ್ಸಾ ಬಿಂತ್ ಸಲ್ಮಾನ್ ವಿರುದ್ಧ ಹೊರಿಸಲಾಗಿತ್ತು.

11,000 ಡಾಲರ್ (ಸುಮಾರು 7.81 ಲಕ್ಷ ರೂಪಾಯಿ) ದಂಡ ಪಾವತಿಸುವಂತೆಯೂ ಸೌದಿ ರಾಜಕುಮಾರಿಗೆ ನ್ಯಾಯಾಲಯ ಆದೇಶಿಸಿದೆ.

ಆದರೆ, ವಿಚಾರಣೆ ಆರೋಪಿಯ ಅನುಪಸ್ಥಿತಿಯಲ್ಲಿ ನಡೆದಿದೆ. ಅವರ ವಿರುದ್ಧ ಈಗಾಗಲೇ ಬಂಧನ ವಾರಂಟ್ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News