ಬಂಟ್ವಾಳ: ಶಂಕಿತ ಡೆಂಗ್ ಗೆ ಯುವ ಉದ್ಯಮಿ ಬಲಿ

Update: 2019-09-13 18:37 GMT

ಬಂಟ್ವಾಳ, ಸೆ. 13: ಶಂಕಿತ ಡೆಂಗ್ ಜ್ವರದಿಂದ ಬಂಟ್ವಾಳ ತಾಲೂಕಿನ ಕೆದಿಲ ಸತ್ತಿಕಲ್ಲು ನಿವಾಸಿ, ಯುವ ಉದ್ಯಮಿಯೊಬ್ಬರು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಶುಕ್ರವಾರ ವರದಿಯಾಗಿದೆ.

ಮೂಲತಃ ಪುತ್ತೂರು ತಾಲೂಕಿನ ದೇಲಂಪಾಡಿಯವರಾದ, ಸದ್ಯ ಬಂಟ್ವಾಳ ತಾಲೂಕಿನ ಪೆರಮೊಗರು ನಿವಾಸಿ ಪ್ರಶಾಂತ ಸರಳಾಯ (40) ಮೃತಪಟ್ಟವರು ಎಂದು ತಿಳಿದು ಬಂದಿದೆ.

ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಅವರು ಪ್ರಾರಂಭದಲ್ಲಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಎರಡು ದಿನಗಳ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಈ ಬಗ್ಗೆ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News