ಮಹಿಳೆಯ ಸಮಸ್ಯೆ ಸಮಾಜದ ಸಮಸ್ಯೆ: ಪಾರ್ವತಿ ಐತಾಳ್

Update: 2019-09-14 13:18 GMT

ಬ್ರಹ್ಮಾವರ, ಸೆ.14: ಮಹಿಳೆಯ ಸಮಸ್ಯೆ ಕೇವಲ ಮಹಿಳೆಗೆ ಸಂಬಂಧಪಡದೇ ಇಡೀ ಸಮಾಜಕ್ಕೆ ಸೇರಿದೆ. ಮಹಿಳೆಯ ಸಮಸ್ಯೆಯನ್ನು ಎಲ್ಲರೂ ಒಂದುಗೂಡಿ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಕುಂದಾಪುರ ಭಂಡಾರ್‌ಕಾರ್ಸ್‌ ಪದವಿ ಕಾಲೇಜಿನ ನಿವೃತ್ತ ಪ್ರಾಧ್ಯಾಕಿ ಡಾ.ಪಾರ್ವತಿ ಜಿ ಐತಾಳ್ ಹೇಳಿದ್ದಾರೆ.

ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯನ್ನು ಶನಿವಾರ ಉ್ಘಾಟಿಸಿ ಅವರು ಮಾತನಾಡುತಿದ್ದರು.
ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ಮಹಿಳಾ ವೇದಿಕೆಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಮಹಿಳೆಯ ಅಗತ್ಯತೆಗಳು ಬದಲಾಗುತ್ತಿವೆ. ಮಹಿಳೆಯ ಅಭಿವೃದ್ಧಿಗೆ ಅಡ್ಡಿಯಾದ ಮೂಲ ಸಮಸ್ಯೆಯನ್ನು ಕಂಡು ಹಿಡಿದು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕು. ಮಹಿಳೆಯು ತನ್ನ ಆಂತರಿಕ ತಿಳುವಳಿಕೆ ಮತ್ತು ತನ್ನತನಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕು. ಇಂದು ಪುರುಷನಿಗೆ ಸರಿಸಮಾನಾಗಿ ಮಹಿಳೆಗೆ ಇರುವುದರಿಂದ ಮಹಿಳೆಯ ಸಮಸ್ಯೆ ಯನ್ನು ಪುರುಷರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಸ್ಯಾಮುಯೆಲ್ ಕೆ ಸ್ಯಾಮುಯೆಲ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲೆ ಪ್ರೊ.ಎಲಿಜೆಬೆತ್ ರಾಯ್ ಉಪಸ್ಥಿತರಿದ್ದರು.

ಮಹಿಳಾ ವೇದಿಕೆಯ ಸಂಚಾಲಕಿ ಹಾಗೂ ಉಪನ್ಯಾಸಕಿ ಸ್ಮಿತಾ ಮೈಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಲ್ವಾ ಸ್ವಾಗತಿಸಿ ಸುರಭಿ ವಂದಿಸಿದರು. ವಫಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಜ್ಯೋತಿ ಶೆಟ್ಟಿ ಮತ್ತು ಸರಿತಾ ಸಹಕರಿಸಿದರು.

ಮಹಿಳಾ ವೇದಿಕೆಯ ಸಂಚಾಲಕಿ ಹಾಗೂ ಉಪನ್ಯಾಸಕಿ ಸ್ಮಿತಾ ಮೈಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸಲ್ವಾ ಸ್ವಾಗತಿಸಿ ಸುರಭಿ ವಂದಿಸಿದರು. ವಫಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಜ್ಯೋತಿ ಶೆಟ್ಟಿ ಮತ್ತು ಸರಿತಾ ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News