ಭ್ರಷ್ಟ ಅಧಿಕಾರಿಗಳಿಗೆ ಗುಂಡು ಹಾರಿಸಿ, ಆದರೆ ಕೊಲ್ಲಬೇಡಿ: ಜನರಿಗೆ ಫಿಲಿಪ್ಪೀನ್ಸ್ ಅಧ್ಯಕ್ಷ ಕರೆ

Update: 2019-09-14 15:23 GMT

ಮನಿಲಾ (ಫಿಲಿಪ್ಪೀನ್ಸ್), ಸೆ. 14: ಕೆಲಸ ಮಾಡಿ ಕೊಡಲು ಹಣ ಕೇಳುವ ಸರಕಾರಿ ಅಧಿಕಾರಿಗಳಿಗೆ ಜನರು ‘ಗುಂಡು ಹಾರಿಸಬಹುದು, ಆದರೆ ಕೊಲ್ಲಬಾರದು’ ಎಂದು ಫಿಲಿಪ್ಪೀನ್ಸ್ ಅಧ್ಯಕ್ಷ ರಾಡ್ರಿಗೊ ಡುಟರ್ಟ್ ಗುರುವಾರ ಹೇಳಿದ್ದಾರೆ.

ಸರಕಾರಿ ಕಚೇರಿಗಳೊಂದಿಗೆ ವ್ಯವಹರಿಸುವಾಗ ದೃಢವಾಗಿ ವರ್ತಿಸುವಂತೆ ಅವರು ಜನರನ್ನು ಒತ್ತಾಯಿಸಿದರು.

‘‘ನೀವು ಸರಕಾರಿ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ದೃಢವಾಗಿ ವರ್ತಿಸಬೇಕು ಎಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು ತೆರಿಗೆ, ಶುಲ್ಕ ಪಾವತಿಸುವಾಗ ಅಥವಾ ಅನುಮೋದನೆ ಕೋರುವಾಗ ಅಥವಾ ಯಾವುದೇ ವ್ಯವಹಾರ ನಡೆಸುವಾಗ ಈ ಮೂರ್ಖರು ಲಂಚ ಕೇಳಿದರೆ ಅವರ ಕಪಾಳಕ್ಕೆ ಬಾರಿಸಿ. ನಿಮ್ಮಲ್ಲಿ ಬಂದೂಕು ಇದ್ದರೆ ನೀವು ಅವರಿಗೆ ಗುಂಡು ಹಾರಿಸಬಹುದು. ಆದರೆ ಕೊಲ್ಲಬೇಡಿ. ಯಾಕೆಂದರೆ ಕ್ಷಮಾದಾನ ಪಡೆಯುವವರ ಪಟ್ಟಿಯಲ್ಲಿ ನಿಮ್ಮ ಹೆಸರು ಇರಲಿಕ್ಕಿಲ್ಲ’’ ಎಂದು ಫಿಲಿಪ್ಪೀನ್ಸ್ ಅಧ್ಯಕ್ಷ ಹೇಳಿದರು.

ಅವರು ಸರಕಾರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News