ವಿತ್ತ ಸಚಿವಾಲಯ, ನೀತಿ ಆಯೋಗದ ಆಕ್ಷೇಪಗಳಿದ್ದರೂ 106 ರಾಷ್ಟ್ರೀಯ ಜಲಮಾರ್ಗಗಳನ್ನು ಹೆಸರಿಸಿದ ಸಂಪುಟ

Update: 2019-09-14 16:59 GMT

ಹೊಸದಿಲ್ಲಿ,ಸೆ.14: ದೇಶದಲ್ಲಿಯ 106 ಜಲಮಾರ್ಗಗಳನ್ನು ರಾಷ್ಟ್ರೀಯ ಜಲಮಾರ್ಗಗಳನ್ನಾಗಿ ಘೋಷಿಸಲು ಕೇಂದ್ರ ಸಂಪುಟವು ನಿರ್ಧರಿಸಿದ್ದು, ಇದಕ್ಕೆ ನೀತಿ ಆಯೋಗ ಮತ್ತು ವಿತ್ತ ಸಚಿವಾಲಯದ ಪ್ರಬಲ ವಿರೋಧ ವ್ಯಕ್ತವಾಗಿದೆ.

 ಸೂಕ್ತ ಆದ್ಯತೆ ಮತ್ತು ವ್ಯಾಪಕ ಚರ್ಚೆ ಇಲ್ಲದೆ ಯಾವುದೇ ಜಲಮಾರ್ಗವನ್ನು ರಾಷ್ಟ್ರಿಯ ಜಲಮಾರ್ಗವನ್ನಾಗಿ ಘೋಷಿಸುವುದು ಸರಿಯಲ್ಲ ಎಂದು ಸರಕಾರದ ಇವೆರಡೂ ಪ್ರಮುಖ ವಿಭಾಗಗಳು ಹಡಗುಗಾರಿಕೆ ಸಚಿವಾಲಯಕ್ಕೆ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದವು. ಇಷ್ಟೊಂದು ಭಾರೀ ಸಂಖ್ಯೆಯ ಜಲಮಾರ್ಗಗಳನ್ನು ರಾಷ್ಟ್ರೀಯ ಜಲಮಾರ್ಗಗಳೆಂದು ಘೋಷಿಸುವುದರಿಂದ ಕೇಂದ್ರದ ಮೇಲೆ ಭಾರೀ ಹಣಕಾಸಿನ ಹೊರೆ ಬೀಳುತ್ತದೆ ಮತ್ತು ಜಲ ಪರಿಸರ ವ್ಯವಸ್ಥೆಗೆ ಸರಿಪಡಿಸಲಾಗದ ಹಾನಿಯುಂಟಾಗುತ್ತದೆ ಎಂದೂ ಅವು ತಿಳಿಸಿದ್ದವು.

ಏಕಕಾಲದಲ್ಲಿ ಇಷ್ಟೊಂದು ರಾಷ್ಟ್ರೀಯ ಜಲಮಾರ್ಗಗಳನ್ನು ಘೋಷಿಸುವ ನಿರ್ಧಾರವನ್ನು ವಿತ್ತ ಸಚಿವಾಲಯವು ಬಲವಾಗಿ ಆಕ್ಷೇಪಿಸಿತ್ತು.

 ಅಕ್ಟೋಬರ್,1986 ಮತ್ತು ನವಂಬರ್,2008ರ ನಡುವೆ ದೇಶದಲ್ಲಿ ಒಟ್ಟು ಐದು ಜಲಮಾರ್ಗಗಳನ್ನು ರಾಷ್ಟ್ರೀಯ ಜಲಮಾರ್ಗಗಳನ್ನಾಗಿ ಘೋಷಿಸಲಾಗಿತ್ತು. ಈ ಪೈಕಿ ಮೂರು ಜಲಮಾರ್ಗಗಳು ಮಾತ್ರ ಸೂಕ್ತವಾಗಿ ಕಾರ್ಯಾಚರಿಸುತ್ತಿದ್ದು, ಇತರ ಎರಡು ಇನ್ನೂ ಕಾರ್ಯಾಚರಣೆಗಳನ್ನು ಆರಂಭಿಸಬೇಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News